ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಆತಂಕ ಮಾನೆಮಾಡಿದ್ದು, ಮತ್ತೊಂದೆಡೆ ಹಕ್ಕಿಜ್ವರ ಸಹ ಕಾಲಿಟ್ಟಿದೆ ಎನ್ನಲಾಗ್ತಿದೆ.
ಕೊಡಗಿನ ಕೊಟ್ಟಮುಡಿ ಗ್ರಾಮದಲ್ಲಿ ಕಾಗೆಗಳು ಸತ್ತು ಬಿದ್ದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕೊಡಮುಡಿಯ ಅಂಗನವಾಡಿ ಸೇರಿದಂತೆ ಗ್ರಾಮದ ಹಲವೆಡೆ ಕಾಗೆಗಳು ಸತ್ತು ಬಿದ್ದಿವೆ. ಜಿಲ್ಲೆಯಲ್ಲಿ ಕೊರೊನಾ ವೈರಸ್ ಒಂದು ಪ್ರಕರಣ ಖಚಿತವಾಗುತ್ತಿದ್ದಂತೆ ಇದೀಗ ಎರಡೆರೆಡು ಭೀತಿ ಶುರುವಾಗಿದೆ.