ಕೊಡಗು : ಡ್ಯಾನ್ಸ್ ಕಲಿಸಿ ಕೊಡ್ತೇನೆಂದು ಕ್ಲಾಸ್ಗೆ ಕರೆಯಿಸಿದವ ಬಳಿಕ ತನ್ನನ್ನೇ ಪ್ರೀತಿಸುವಂತೆ ಅಸಭ್ಯವಾಗಿ ವರ್ತಿಸಿದ್ದ. ಆದರೆ, ಅಪ್ರಾಪ್ತೆಯೊಬ್ಬಳು ಒಪ್ಪದಿದ್ದಾಗ ಆಕೆಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸೊಮವಾರಪೇಟೆ ತಾಲೂಕು ಶನಿವಾರಸಂತೆಯ ಸಲ್ಮಾನ್ ಎಂಬ ಯುವಕನ ಮೇಲೆ ಈ ಆರೋಪ ಕೇಳಿ ಬಂದಿದೆ. ಈತ ಯುವತಿಯನ್ನು ತಾನು ಶನಿವಾರಸಂತೆಯಲ್ಲಿ ನಡೆಸುತ್ತಿದ್ದ ಡ್ಯಾನ್ಸ್ ಶಾಲೆಗೆ ಬರಲು ಹೇಳಿದ್ದನಂತೆ. ಆಕೆ ಬಂದ ನಂತರ ಪ್ರೀತಿಸುವಂತೆ ಒತ್ತಾಯ ಮಾಡಿದ್ದನಂತೆ. ಪ್ರೀತಿಸಲು ಒಪ್ಪದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಬೆಳೆಗೆ ನಿರುಣಿಸಲು ಹೋದ ವೇಳೆ ವಿದ್ಯುತ್ ಶಾಕ್ : ಕಾಲುವೆಗೆ ಜಾರಿ ಬಿದ್ದು ರೈತ ಸಾವು!
ಈ ಸಂಬಂಧ ಸಂಘಟನೆಯೊಂದರ ಮುಖಂಡರಿಗೆ ಮಾಹಿತಿ ತಿಳಿದಿದೆ. ಆಗ ಡ್ಸಾನ್ಸ್ ನಡೆಸುತ್ತಿದ್ದ ತರಗತಿಗೆ ಬಂದು ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಕುರಿತು ಶನಿವಾರಸಂತೆಯ ಸಂಘಟನೆಯೊಂದರ ಮುಖಂಡರು, ಆರೋಪಿ ಸಲ್ಮಾನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಶನಿವಾರಸಂತೆ ಠಾಣೆ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.