ಕೊಡಗು: ಕೈಯಲ್ಲಿ ಬಂದೂಕು, ಚಾಕು, ತ್ರಿಶೂಲ ಹಿಡಿದು ವಿದ್ಯಾರ್ಥಿಗಳು ಶಸ್ತ್ರಾಸ್ತ್ರ ತರಬೇತಿ ಪಡೆದುಕೊಂಡಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಸಾಯಿ ಶಂಕರ್ ಎಜುಕೇಶನಲ್ ಸಂಸ್ಥೆಯಲ್ಲಿ ಇದೇ ತಿಂಗಳ 5 ರಿಂದ 13ರ ವರೆಗೆ ಸಂಘ ಪರಿವಾರ ಶೌರ್ಯ ಪ್ರಶಿಕ್ಷಣ ವರ್ಗ 2022 ಹೆಸರಿನಲ್ಲಿ ಹಿಂದುತ್ವ ಕಾರ್ಯಕರ್ತರಿಗೆ ಈ ತರಬೇತಿ ನೀಡಿದೆ.
ಈ ತರಬೇತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಧರ್ಮ ಉಳಿಸಿಕೊಳ್ಳಲು ಶಸ್ತ್ರಾಸ್ತ್ರ ತರಬೇತಿ ಅಗತ್ಯ ಎಂದು ಬಜರಂಗದಳ ಸಮರ್ಥನೆ ಮಾಡಿಕೊಂಡ್ರೆ ಇತ್ತ ಎಸ್ಡಿಪಿಐ ಕಾರ್ಯಕರ್ತರು ಮಾತ್ರ ಈ ತರಬೇತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂಗಳನ್ನು ಒಗ್ಗೂಡಿಸಿದರೆ ಧರ್ಮ ಅದಾಗಿಯೇ ಉಳಿಯುತ್ತೆ. ಅದು ಬಿಟ್ಟು ಕೈಗೆ ಚಾಕು ಕೊಟ್ರೆ ಮಕ್ಕಳ ಭವಿಷ್ಯವೇನು?. ಭಾಷಣ ಮಾಡಿ ಮಕ್ಕಳ ಮನಸ್ಸು ಹಾಳು ಮಾಡ್ತಾರೆ. ಇದೇ ಮಕ್ಕಳು ಭಾಷಣ ಕೇಳಿ ಅನ್ಯಧರ್ಮದವರಿಗೆ ಚಾಕು ಹಾಕ್ತಾರೆ. ವೈಯಕ್ತಿಕ ದ್ವೇಷನೂ ಹುಟ್ಟುತ್ತೆ. ಎರಡು ಧರ್ಮಗಳ ನಡುವೆ ಸಂಘರ್ಷನೂ ಆಗುತ್ತೆ. ಧರ್ಮ-ಧರ್ಮಗಳ ನಡುವೆ ವಿಷ ಬೀಜ ಬಿತ್ತೋಕೆ ಹೇಳಿಕೊಡೋದು ಸರಿನಾ? ಬಜರಂಗದಳದಿಂದ ಇದೆಂಥ ಹಿಂಸಾತ್ಮಕ ಟ್ರೈನಿಂಗ್ ? ಧರ್ಮ ಉಳಿಸೋದು ಅಂದ್ರೆ ಚುಚ್ಚೋದಾ, ಶೂಟ್ ಮಾಡೋದಾ? ಎಂದು ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಬಶೀರ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಪ್ರಶ್ನಿಸುವ ನೈತಿಕ ಹಕ್ಕು ಅವರಿಗಿಲ್ಲ: ಈ ಸಂಬಂಧ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಭಾರತೀಶ ಪ್ರತಿಕ್ರಿಯಿಸಿದ್ದು, ಎಸ್ಡಿಪಿಐ ಕಾರ್ಯಕರ್ತರು ಉದ್ಧಟತನದ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಧರ್ಮದ ಆಚರಣೆಯನ್ನು ಪ್ರಶ್ನಿಸುವ ನೈತಿಕ ಹಕ್ಕು ಅವರಿಗಿಲ್ಲ. ನಾವು ಯಾವುದೇ ಕೆಟ್ಟ ಕೆಲಸ ಮಾಡುವವರಲ್ಲ. ಆದರೆ, ನಮ್ಮ ಸಂಪ್ರದಾಯ ಆಚರಣೆಯನ್ನು ಪ್ರಶ್ನೆ ಮಾಡುವವರು ಅತಿಯಾದ ಕೋಮುವಾದ ಉಳ್ಳವರು. ಇದನ್ನು ಅವರು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ನಿಂದ ಕ್ರಮಕ್ಕೆ ಆಗ್ರಹ.. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಶಾಲೆಯಲ್ಲಿ ತ್ರಿಶೂಲ ದೀಕ್ಷೆ, ಗನ್ ತರಬೇತಿ ನೀಡಿದ್ದು ಯಾರು? ಎಂದು ಪ್ರಶ್ನಿಸಿದೆ. ಅಲ್ಲದೆ, ಕೂಡಲೇ ಇಂತಹ ಸಮಾಜಘಾತುಕ ಶಕ್ತಿಗಳ ವಿರುದ್ಧ ಕೈಗೊಳ್ಳಿ ಎಂದು ಆಗ್ರಹಿಸಿದೆ.
-
'@JnanendraAraga ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಶಾಲೆಯಲ್ಲಿ ತ್ರಿಶೂಲ ದೀಕ್ಷೆ, ಗನ್ ತರಬೇತಿ ನೀಡಿದ್ದು ಯಾರು? ಯಾವ ಸಂಘಟನೆ? ಅದಕ್ಕೆ ಅನುಮತಿ ಕೊಟ್ಟವರು ಯಾರು? ಮಕ್ಕಳ ಕೈಗೆ ಚಾಕು ಚೂರಿ ನೀಡಿ ಪ್ರಚೋದಿಸುತ್ತಿದ್ದರೂ ನೋಡಿಕೊಂಡು ಸುಮ್ಮನಿದ್ದೀರಾ? ಕೂಡಲೇ ಇಂತಹ ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಿ. pic.twitter.com/FUKqNfzNux
— Karnataka Congress (@INCKarnataka) May 16, 2022 " class="align-text-top noRightClick twitterSection" data="
">'@JnanendraAraga ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಶಾಲೆಯಲ್ಲಿ ತ್ರಿಶೂಲ ದೀಕ್ಷೆ, ಗನ್ ತರಬೇತಿ ನೀಡಿದ್ದು ಯಾರು? ಯಾವ ಸಂಘಟನೆ? ಅದಕ್ಕೆ ಅನುಮತಿ ಕೊಟ್ಟವರು ಯಾರು? ಮಕ್ಕಳ ಕೈಗೆ ಚಾಕು ಚೂರಿ ನೀಡಿ ಪ್ರಚೋದಿಸುತ್ತಿದ್ದರೂ ನೋಡಿಕೊಂಡು ಸುಮ್ಮನಿದ್ದೀರಾ? ಕೂಡಲೇ ಇಂತಹ ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಿ. pic.twitter.com/FUKqNfzNux
— Karnataka Congress (@INCKarnataka) May 16, 2022'@JnanendraAraga ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಶಾಲೆಯಲ್ಲಿ ತ್ರಿಶೂಲ ದೀಕ್ಷೆ, ಗನ್ ತರಬೇತಿ ನೀಡಿದ್ದು ಯಾರು? ಯಾವ ಸಂಘಟನೆ? ಅದಕ್ಕೆ ಅನುಮತಿ ಕೊಟ್ಟವರು ಯಾರು? ಮಕ್ಕಳ ಕೈಗೆ ಚಾಕು ಚೂರಿ ನೀಡಿ ಪ್ರಚೋದಿಸುತ್ತಿದ್ದರೂ ನೋಡಿಕೊಂಡು ಸುಮ್ಮನಿದ್ದೀರಾ? ಕೂಡಲೇ ಇಂತಹ ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಿ. pic.twitter.com/FUKqNfzNux
— Karnataka Congress (@INCKarnataka) May 16, 2022
ಇದನ್ನೂ ಓದಿ: ಪಿಎಸ್ಐ ಅಕ್ರಮ ಜಾಲ : ಆರ್ಎಸ್ಐ ಸೇರಿ ಇಬ್ಬರನ್ನು ಬಂಧಿಸಿದ ಸಿಐಡಿ