ETV Bharat / state

ಕೊಡಗಿನಲ್ಲಿ ವಿದ್ಯುತ್ ಬಿಲ್ ಜಾಸ್ತಿ ಕೊಟ್ಟಿದ್ದಾರೆಂದು ಜಗಳ: ಬಿಲ್ ಕಲೆಕ್ಟರ್​ಗೆ ಚಾಕು ಇರಿತ

ವಿದ್ಯುತ್ ಬಿಲ್ ಕಲೆಕ್ಟರ್​ಗೆ ಚಾಕು ಇರಿದಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ಜರುಗಿದೆ.

ವಿದ್ಯುತ್ ಬಿಲ್ ಕಲೆಕ್ಟರ್​ಗೆ ಚಾಕು ಇರಿತ
ವಿದ್ಯುತ್ ಬಿಲ್ ಕಲೆಕ್ಟರ್​ಗೆ ಚಾಕು ಇರಿತ
author img

By

Published : Jul 13, 2023, 10:34 PM IST

ಕೊಡಗು : ವಿದ್ಯುತ್ ಬಿಲ್​ ಜಾಸ್ತಿ ಕೊಟ್ಟಿದ್ದಾರೆ ಎಂದು ಜಗಳ ತೆಗೆದು ಬಿಲ್​ ಕಲೆಕ್ಟರ್​ಗೆ ಚಾಕು ಇರಿದಿರುವ ಘಟನೆ ಸೋಮವಾರಪೇಟೆ ತಾಲೂಕಿನ ಜಂಬೂರಿನಲ್ಲಿ ನಡೆದಿದೆ. ಪ್ರಶಾಂತ್ ಚಾಕು ಇರಿತಕ್ಕೆ ಒಳಗಾದ ವಿದ್ಯುತ್ ಬಿಲ್ ಕಲೆಕ್ಟರ್ ಆಗಿದ್ದಾರೆ. ಜಂಬೂರು ಪುನರ್ವಸತಿ ಬಡಾವಣೆಯ ರತೀಶ್ ಎಂಬಾತ ಕೃತ್ಯ ಎಸಗಿದ್ದಾನೆ. ಘಟನೆಯಲ್ಲಿ ಪ್ರಶಾಂತ್‌ ಅವರ ಹೊಟ್ಟೆ ಭಾಗಕ್ಕೆ ತೀವ್ರ ಗಾಯವಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಕುರಿತು ಮಾದಾಪುರ ಹೊರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆ ಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಬಾಕಿ ಕರೆಂಟ್ ಬಿಲ್ ಕಟ್ಟು ಎಂದಿದ್ದಕ್ಕೆ ಹಲ್ಲೆ: ಮೇ 31 ರಂದು ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಬಾಕಿ ಕರೆಂಟ್ ಬಿಲ್ ಕಟ್ಟು ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಜೆಸ್ಕಾಂನ ಜೆಇ ಮತ್ತು ಲೈನ್​ಮೆನ್​​​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿತ್ತು. ಆಳಂದ ಪಟ್ಟಣದ ಸೋನಾರ್ ಕಾಲೋನಿಯ ನಿವಾಸಿ ವಸೀಂ ಕಳೆದ ಆರು ತಿಂಗಳಿಂದ ತನ್ನ ಮನೆಯ ಮತ್ತು ತನ್ನ ಢಾಬಾದ ವಿದ್ಯುತ್ ಬಿಲ್ ಕಟ್ಟದೆ ಬಾಕಿ ಉಳಿಸಿಕೊಂಡಿದ್ದ. ಇದನ್ನು ಕಟ್ಟಿಸಿಕೊಳ್ಳಲು ಜೆಇ ಸಿದ್ರಾಮಪ್ಪ ಮತ್ತು ಲೈನ್ ಮೆನ್ ಇಜಾಜ್ ವಸೀಂ ಮನೆಗೆ ತೆರಳಿ ಬಾಕಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಹೇಳಿದ್ದರು.

ಆದರೆ, ವಿದ್ಯುತ್​​ ಶುಲ್ಕವನ್ನು ಕಟ್ಟುವುದಿಲ್ಲ ಎಂದು ಜೆಸ್ಕಾಂ ಸಿಬ್ಬಂದಿ ಜೊತೆ ವಸೀಂ ವಾದ ಮಾಡಿದ್ದನು. ಈ ಸಂದರ್ಭದಲ್ಲಿ ಬಾಕಿ ಕರೆಂಟ್ ಬಿಲ್ ಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಟ್ ಮಾಡಲು ಮುಂದಾದಾಗ, ವಸೀಂ ಜೆಇ ಸಿದ್ರಾಮಪ್ಪ ಮತ್ತು ಜೆಇ ಇಜಾಜ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲು, ಮತ್ತು ಕಬ್ಬಿಣದ ರಾಡ್​​​ನಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದನು. ಘಟನೆಯಲ್ಲಿ ಜೆಇ ಸಿದ್ರಾಮಪ್ಪಗೆ ಗಂಭೀರ ಗಾಯಗಳಾಗಿದ್ದು, ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹಿಂಬಾಕಿ ಪಾವತಿಸಲು ಕಾಲಾವಕಾಶ : ಗ್ರಾಹಕರು ವಿದ್ಯುತ್ ಬಿಲ್‌ನ ಹಿಂಬಾಕಿ ಉಳಿಸಿಕೊಂಡಿದ್ದರೂ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಸಿಗಲಿದೆ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ. ಇದೇ ವೇಳೆ ಹಿಂಬಾಕಿಯನ್ನು ಸೆ.30 ರೊಳಗೆ ಪಾವತಿಸುವಂತೆ ಮೂರು ತಿಂಗಳು ಕಾಲಾವಕಾಶ ನೀಡಲಾಗಿದೆ. ಜುಲೈ 25ರೊಳಗೆ ಯೋಜನೆಗೆ ನೋಂದಾಯಿಸಿಕೊಂಡಲ್ಲಿ ಆಗಸ್ಟ್ ತಿಂಗಳ ಬಿಲ್​ನಲ್ಲಿ ಯೋಜನೆಯ ಪ್ರಯೋಜನ ದೊರಕಲಿದೆ. ಹಾಗೆಯೇ, ಜುಲೈ 25 ರಿಂದ ಆಗಸ್ಟ್ 25ರೊಳಗೆ ನೋಂದಾಯಿಸಿದಲ್ಲಿ ಸೆಪ್ಟೆಂಬರ್ ತಿಂಗಳ ಬಿಲ್​ನಲ್ಲಿ ಯೋಜನೆಯ ಪ್ರಯೋಜನ ಸಿಗಲಿದೆ. (ಬಿಲ್ಲಿಂಗ್ ಅವಧಿ ಪ್ರತಿ ತಿಂಗಳ 25 ನೇ ತಾರೀಖಿನಿಂದ ಮುಂದಿನ ತಿಂಗಳ 25 ತಾರೀಖಿನವರೆಗೆ) ಎಂದು ಮಾಹಿತಿ ನೀಡಿದೆ.

ಈ ಪ್ರಯೋಜನ ಪಡೆಯಲು ನಿಮ್ಮ ವಿದ್ಯುತ್ ಬಳಕೆಯು ಸರಾಸರಿ 200 ಯೂನಿಟ್ ಮೀರಿರಬಾರದು. ಗೃಹ ಜ್ಯೋತಿ ಯೋಜನೆಗೆ ಗ್ರಾಹಕರು ಜುಲೈ 25ರ ನಂತರ ಅರ್ಜಿ ಸಲ್ಲಿಸಿದರೆ ಅವರಿಗೆ ಆಗಸ್ಟ್ ತಿಂಗಳಲ್ಲಿ ಬರುವ ಬಿಲ್​ನಲ್ಲಿ ಪ್ರಯೋಜನ ಸಿಗುವುದಿಲ್ಲ. ಆದರೆ ಯೋಜನೆಯ ಪ್ರಯೋಜನವನ್ನು ಅವರು ಸೆಪ್ಟೆಂಬರ್ ತಿಂಗಳಲ್ಲಿ ಪಡೆಯಲಿದ್ದಾರೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ : ಬಜ್ಜಿ ತಿನ್ನಲು ಹೋಗಿದ್ದ ಯುವಕನಿಗೆ ಚೂರಿ ಇರಿತ: ಐವರ ವಿರುದ್ಧ ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.