ETV Bharat / state

ವಾರ್ಷಿಕ ಕ್ರೀಡಾಕೂಟ: ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಮರ್ಥ್ಯ ಪ್ರದರ್ಶಿಸಿದ 900 ಪೊಲೀಸರು - police sports in kodagu

ಮಡಿಕೇರಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸರಿಗೆ ವಾರ್ಷಿಕ ಕ್ರೀಡಾಕೂಟ ನಡೆಯಿತು. ಜಿಲ್ಲೆಯ ವಿವಿಧ ಠಾಣೆಗಳಿಂದ 900 ಕ್ಕೂ ಹೆಚ್ಚು ಸಿಬ್ಬಂದಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.

annual sports event for the police
ಪೊಲೀಸರಿಗೆ ವಾರ್ಷಿಕ ಕ್ರೀಡಾಕೂಟ
author img

By

Published : Nov 20, 2022, 9:23 PM IST

ಮಡಿಕೇರಿ(ಕೊಡಗು): ಕಾನೂನು ಸುವ್ಯವಸ್ಥೆ ಕಾಪಾಡುತ್ತ ಸದಾ ಒತ್ತಡದ ಬದುಕು ನಡೆಸುವ ಪೊಲೀಸರಿಗೆ ವಾರ್ಷಿಕ ಕ್ರೀಡಾ ಕೂಟವನ್ನು ಭಾನುವಾರ ಮಡಿಕೇರಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಿತು.

ಮಡಿಕೇರಿಯಲ್ಲಿ ಮೂರು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಜಿಲ್ಲೆಯ 900ಕ್ಕೂ ಹೆಚ್ಚು ಸಿಬ್ಬಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿರೋದು ವಿಶೇಷವಾಗಿತ್ತು. ಯಾವುದೇ ಹಿರಿಯ ಕಿರಿಯ ಎಂಬ ಬೇಧವಿಲ್ಲದೆ ಕ್ರೀಡಾ ಸ್ಫೂರ್ತಿಯನ್ನ ಪ್ರದರ್ಶಿಸಿದರು. ಯಾವಾಗಲೂ ಡ್ಯೂಟಿ ಡ್ಯೂಟಿ ಅಂತ ಕರ್ತವ್ಯದಲ್ಲಿ ಇರುತ್ತಿದ್ದ ಪೊಲೀಸರು ಎಲ್ಲವನ್ನು ಬದಿಗೊತ್ತಿ ಕ್ರೀಡಾ ಕೂಟದಲ್ಲಿ ಸ್ಪರ್ಧಿಸಿದರು.

ಜಿಲ್ಲೆಯ ವಿವಿಧ ಠಾಣೆಗಳಿಂದ ಆಗಮಿಸಿದ ನೂರಾರು ಪೊಲೀಸರು ಕ್ರಿಕೆಟ್ , ವಾಲಿಬಾಲ್, ಕಬಡ್ಡಿ ಮತ್ತು ಟ್ರಾಕ್ ಆ್ಯಂಡ್​ ಫೀಲ್ಡ್ ಆಟಗಳಲ್ಲಿ ಸ್ಪರ್ಧಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಕ್ರೀಡೆಗಳನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕರು ಸಿಳ್ಳೆ ಚಪ್ಪಾಳೆ ಹಾಕಿ ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸಿದರು.

ವಿಶೇಷವಾಗಿ ಪುರುಷರು ಹಾಗೂ ಮಹಿಳಾ ಸಿಬ್ಬಂದಿಯ ಹಗ್ಗ ಜಗ್ಗಾಟ ರೋಚಕವಾಗಿತ್ತು.‌ ಎರಡು ತಂಡಗಳ ನಡುವೆ ನಡೆದ ಹಗ್ಗ ಜಗ್ಗಟಾದ ಫೈನಲ್‌ ಪಂದ್ಯ ಎಲ್ಲರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಕ್ರೀಡಾಕೂಟದಲ್ಲಿ ಪೊಲೀಸರ ದೈಹಿಕ ಮತ್ತು ತಾಂತ್ರಿಕ ಸಾಮರ್ಥ್ಯ ಅನಾವರಣಗೊಂಡಿತು.

ಐಜಿಪಿ ಪ್ರವೀಣ್ ಮಧುಕರ್ ಪವಾರ್ ಮಾತನಾಡಿ, ಪೊಲೀಸರು ತಮ್ಮ ಉತ್ತಮ ಆರೋಗ್ಯಕ್ಕಾಗಿ ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಕ್ರೀಡೆ ಚಟುವಟಿಕೆ ಅಗತ್ಯ ಎಂದು ಪ್ರತಿಪಾದಿಸಿದರು.

ಇಷ್ಟು ದಿನ ಸಭೆ ಸಮಾರಂಭಗಳಲ್ಲಿ ಕೈಯಲ್ಲಿ ಲಾಠಿ, ತಲೆಯಲ್ಲಿ ಟೋಪಿ ಹಾಕ್ಕೊಂಡು ಕರ್ತವ್ಯ ನಿರ್ವವಹಿಸುತ್ತಿದ್ದ ಪೊಲೀಸರು ಎಲ್ಲಾ ಒತ್ತಡವನ್ನು ಬಿಟ್ಟು ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸಿ ಖುಷಿಪಟ್ಟರು.

ಇದನ್ನೂ ಓದಿ:IND VS NZ T20 : ದೀಪಕ್​ ಹೂಡ ಮಾರಕ ಬೌಲಿಂಗ್​.. ಭಾರತಕ್ಕೆ 65ರನ್​ಗಳ ಭರ್ಜರಿ ಗೆಲುವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.