ETV Bharat / state

ಕಾರ್ಮಿಕರಿಗೆ ಏಣಿಗಳಾಗುತ್ತಿವೆ ನೇಣಿನ ಕುಣಿಕೆಗಳು... ಕೊಡಗಲ್ಲಿ ಅಲ್ಯೂಮಿನಿಯಂ ಕಂಟಕ!

ಪೆಪ್ಪರ್ ಕೊಯ್ಲು ಮಾಡೋ ಕಾರ್ಮಿಕ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಕೆಲಸ ಮಾಡೋ ಪರಿಸ್ಥಿತಿ ಇದೀಗ ಕೊಡಗಲ್ಲಿ ನಿರ್ಮಾಣವಾಗಿದೆ. ಆಶ್ವರ್ಯ ಆದರೂ ಇದು ಸತ್ಯ. ಪೆಪ್ಪರ್ ಕೊಯ್ಲಿಗೆ ಬಳಸೋ ಅಲ್ಯೂಮಿನಿಯಂ ಲ್ಯಾಡರ್, ಅಂದ್ರೆ ಏಣಿಗಳು ಕಾರ್ಮಿಕರ ಜೀವಗಳನ್ನು ಬಲಿ ಪಡೀತಿವೆ.

ಅಲ್ಯೂಮೀನಿಯಂ ಲ್ಯಾಡರ್
author img

By

Published : Jun 5, 2019, 9:25 AM IST

ಕೊಡಗು: ಕೊಡಗಲ್ಲಿ ಸಿಗುವ ಸಾಂಬಾರ ಪದಾರ್ಥಗಳ ಪೈಕಿ ಪೆಪ್ಪರ್ ದೇಶ ವಿದೇಶಗಳಲ್ಲೂ ಫೇಮಸ್. ಆದರೆ, ದುರಂತ ಅಂದರೆ ಅದೇ ಪೆಪ್ಪರ್ ಕಲ್ಟಿವೇಶನ್ ಹಾಗೂ ಪ್ರೊಡಕ್ಷನ್ ಪ್ರೊಸೀಜರ್ ಕಾರ್ಮಿಕರ ಜೀವಗಳನ್ನೇ ಬಲಿ ಪಡೀತಿದೆ.

ಹೌದು, ಪೆಪ್ಪರ್ ಕೊಯ್ಲು ಮಾಡೋ ಕಾರ್ಮಿಕ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಕೆಲಸ ಮಾಡೋ ಪರಿಸ್ಥಿತಿ ಇದೀಗ ಕೊಡಗಲ್ಲಿ ನಿರ್ಮಾಣವಾಗಿದೆ. ಆಶ್ವರ್ಯ ಆದರೂ ಇದು ಸತ್ಯ. ಪೆಪ್ಪರ್ ಕೊಯ್ಲಿಗೆ ಬಳಸೋ ಅಲ್ಯೂಮಿನಿಯಂ ಲ್ಯಾಡರ್, ಅಂದ್ರೆ ಏಣಿಗಳು ಕಾರ್ಮಿಕರ ಜೀವಗಳನ್ನು ಬಲಿ ಪಡೀತಿವೆ.

ಹೊಟ್ಟೆಪಾಡಿಗೆ ಬಂದು ಸುಟ್ಟು ಕರಕಲಾಗಿರೋ ಕಾರ್ಮಿಕರು, ತಮ್ಮವರನ್ನ ಕಳಕೊಂಡು ಕಣ್ಣೀರಿಡ್ತಿರೋ ಕುಟುಂಬಗಳು. ಅತ್ತ ಪರಿಹಾರ ಸಿಗದೆ ಇತ್ತ ದಿನಗೂಲಿಯೂ ದೊರಕದೆ ಕಂಗಾಲಾಗಿರೋ ಅಮಾಯಕ ಜೀವಗಳು.. ಇಂತಹ ದೃಶ್ಯಗಳಿಗೆ ದಿನವೂ ಸಾಕ್ಷಿಯಾಗ್ತಿದೆ ಕೊಡಗು ಜಿಲ್ಲೆ.

ಹೌದು... ಹೇಳಿ ಕೇಳಿ ಕೊಡಗು ಜಿಲ್ಲೆ ಪೆಪ್ಪರ್ ಅಂದರೆ ಕಾಳುಮೆಣಸು ಉತ್ಪಾದನೆಯಲ್ಲಿ ದೇಶ-ವಿದೇಶಗಳಲ್ಲೂ ಹೆಸರುವಾಸಿ. ಕೊಡಗಿನಲ್ಲಿ ಸಿಗುವ ಗುಣಮಟ್ಟದ ಪೆಪ್ಪರ್ ಬೇರೆಲ್ಲೂ ಸಿಗಲ್ಲ. ಆದರೆ, ಅಂತಹ ಪೆಪ್ಪರ್ ನಿಮ್ಮ ಅಡಿಗೆ ಮನೆ ಸೇರೋದ್ರೊಳಗೆ ಅದೆಷ್ಟೋ ಅಮಾಯಕ ಜೀವಗಳನ್ನ ಬಲೀ ಪಡೀತಿದೆ. ಆಶ್ಚರ್ಯ ಆದರೂ ಇದು ಸತ್ಯ.

ಅಲ್ಯೂಮಿನಿಯಂ ಲ್ಯಾಡರ್

ಕೊಡಗಿನ ಪೆಪ್ಪರ್ ಪ್ಲಾಂಟೇಶನ್​ನಲ್ಲಿ ಹೊಟ್ಟೆ ಪಾಡಿಗೆ ದುಡಿಯೋ ಕಾರ್ಮಿಕರು ಪೆಪ್ಪರ್ ಕೊಯ್ಲಿಗೆ ಬಳಸೋ ಅಲ್ಯೂಮಿನಿಯಂ ಏಣಿಗಳಿಂದ ತಮ್ಮ ಪ್ರಾಣವನ್ನೇ ಒತ್ತೆ ಇಡುತಿದ್ದಾರೆ. ಪೆಪ್ಪರ್ ಪ್ಲಾಂಟೇಷನ್ ಒಳಗೆ ಹಾದು ಹೋಗಿರೋ ಕರೆಂಟ್ ವೈರ್​ಗಳು ಕಾರ್ಮಿಕರು ಬಳಸೋ ಅಲ್ಯೂಮಿನಿಯಂ ಲ್ಯಾಡರ್​ಗೆ ತಾಗಿ ಅವರ ಪ್ರಾಣವನ್ನು ತೆಗೀತಿವೆ. ಅದನ್ನ ಖುದ್ದು ತೋಟದ ಮಾಲೀಕರೂ ಸಹ ಒಪ್ಕೊತೀದಾರೆ. ಆದ್ರೆ ಅದ್ರ ಆಲ್ಟರ್​ನೇಟಿವ್ ಆಗಿರೋ ನಾನ್ ಕಂಡಕ್ಟರ್ ಏಣಿಗಳನ್ನು ಹೆಚ್ಚು ಹಣ ಆಗುತ್ತೆ ಅನ್ನೋ ರೀಜನ್ ಕೊಟ್ಟು ಬಳಸ್ತಿಲ್ಲ. ಕಳೆದ ನಾಲ್ಕು ವರ್ಷದಲ್ಲಿ ಒರೋಬ್ಬರಿ 35ಕ್ಕೂ ಅಧಿಕ ಕಾರ್ಮಿಕರು ಅಲ್ಯೂಮೀನಿಯಂ ಲ್ಯಾಡರ್ ಬಳಸಿ ಪೆಪ್ಪರ್ ಕೊಯ್ಲು ಮಾಡುವಾಗ ಪ್ರಾಣ ತೆತ್ತಿದ್ದಾರೆ.

ಇದನ್ನ ಸೀರಿಯಸ್ ಆಗಿ ತಗೊಂಡಿರೋ ಕೊಡಗು ಜಿಲ್ಲಾಧಿಕಾರಿ ಅನೀಸ್ ಜಾಯ್ ಕಣ್ಮಣಿ, ಅಲ್ಯೂಮಿನಿಯಂ ಲ್ಯಾಡರ್ ಬದಲಿಗೆ ಫೈಬರ್ ಲ್ಯಾಡರ್ ಬಳಸಿ ಅಂತ ಜಿಲ್ಲೆಯ ತೋಟಗಳ ಮಾಲೀಕರಲ್ಲಿ ಮನವಿ ಮಾಡಿದ್ದಾರೆ. ಅಲ್ಯೂಮಿನಿಯಂ ಲ್ಯಾಡರ್ ಬದಲಿಗೆ ಫೈಬರ್ ಲ್ಯಾಡರ್ ಬಳಸಿದ್ದೇ ಆದಲ್ಲಿ ಯಾವ ಕಾರ್ಮಿಕ ಕೂಡ ತನ್ನ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡ್ಬೇಕಾಗಿಲ್ಲ. ಈ ನಿಟ್ಟಿನಲ್ಲಿ ಜಾಗೃತಿಗೆ ಮುಂದಾಗಿರೋ ಜಿಲ್ಲಾಧಿಕಾರಿಗಳು, ದಯವಿಟಟ್ಟು ಫೈಬರ್ ಹಾಗೂ ಬಿದಿರಿನ ಏಣಿಗಳನ್ನ ಬಳಸಿ ಕಾರ್ಮಿಕರ ಪ್ರಾಣ ಉಳಿಸಿ ಅಂತ ಪ್ರಕಟಣೆ ಹೊರಡಿಸಿ ಮನವಿ ಮಾಡಿದ್ದಾರೆ.

ಜಿಲ್ಲೆಯ ಕೆಲ ತೋಟಗಳಲ್ಲಿ ಈ ಫೈಬರ್ ಏಣಿಗಳನ್ನ ಬಲಸಲಾಗ್ತಿದ್ದು, ತೋಟದೊಳಗೆ ಕರೆಂಟ್ ಲೈನ್ ಹಾದು ಹೋಗಿದ್ರೂ ಅದಕ್ಕೆ ಈ ಫೈಬರ್ ಏಣಿಗಳು ತಾಗಿದ್ರೂ ಕಾರ್ಮಿಕರಿಗೆ ಏನೂ ತೊಂದರೆ ಆಗಲ್ಲ ಅಂತಾ ಡಿಸಿ ಮನವಿ ಮಾಡಿದ್ದಾರೆ. ಪೆಪ್ಪರ್ ಕೊಯ್ಲು ಸಂದರ್ಭ ಕರೆಂಟ್ ವೈರ್​ಗೆ ಅಲ್ಯೂಮಿನಿಯಂ ಏಣಿ ತಾಗಿ ಕಾರ್ಮಿಕರು ದುರ್ಮರಣಕ್ಕೀಡಾದ್ರೆ ಅದಕ್ಕೆ ಪರಿಹಾರ ಕೊಡೋಕಾಗಲ್ಲ. ವಿದ್ಯುತ್ ಇಲಾಖೆ ಆಗ್ಲೀ ಸರ್ಕಾರವಾಗ್ಲಿ ಅದಕ್ಕೆ ಪರಿಹಾರ ಕೊಡೋಕೆ ಬರಲ್ಲ. ಇನ್ನು ತೋಟದ ಮಾಲೀಕರು ಕಾರ್ಮಿಕ ಕುಟುಂಬಗಳಿಗೆ ಪರಿಹಾರ ಕೊಟ್ರೆ ಆಯ್ತು ಇಲ್ಲಾಂದ್ರೆ ಇಲ್ಲ.

ಇಂತಹ ಪರಿಸ್ಥಿತಿಯಲ್ಲಿ ಕೊಡಗು ಜಿಲ್ಲಾಡಳಿತ ಕೂಡ ಅಲ್ಯೂಮಿನಿಯಂ ಏಣಿಗಳನ್ನ ಬ್ಯಾನ್ ಮಾಡೋ ರೈಟ್ಸ್ ಇಲ್ದೆ, ಅತ್ತ ಕಾರ್ಮಿಕರ ಪ್ರಣವನ್ನುಳಿಸೋಕೂ ಆಗ್ದೇ ಹೆಣಗಾಡ್ತಿದೆ. ಆದ್ರೆ ಪೆಪ್ಪರ್ ಪ್ಲಾಂಟೇಷನ್ ಮಾಲೀಕರು ಕಾರ್ಮಿಕರ ಹಿತದೃಷ್ಟಿಯಿಂದ ಅಲ್ಯೂಮಿನಿಯಂ ಏಣಿ ಬದಲಿಗೆ ಫೈಬರ್ ಹಾಗೂ ಬ್ಯಾಂಬೂ ಏಣಿಗಳನ್ನ ಬಳಸಿದ್ರೆ ಕಾರ್ಮಿಕರ ಪ್ರಾಣ ಉಳಿಸಬಹುದು ಎಂಬುದು ಕೊಡಗು ಜಿಲ್ಲಾಡಳಿತದ ಮನವಿ.

Intro:ಕಾಫಿ ತೋಟಗಳಲ್ಲಿ ಬಳಸುತ್ತಿರೊ ಏಣಿಗಳೇ ಆಗುತ್ತಿವೆ ಕುಣಿಕೆಗಳು...!!

ಕೊಡಗು: ಕಾಫಿಯ ನಾಡು, ಸಾಂಬಾರ ಪದಾರ್ಥಗಳ ನೆಲೆವೀಡು ಕೊಡಗು. ಕೊಡಗಲ್ಲಿ ಸಿಗುವ ಸಾಂಬಾರ ಪದಾರ್ಥಗಳ ಪೈಕಿ ಪೆಪ್ಪರ್ ದೇಶ ವಿದೇಶಗಳಲ್ಲೂ ಫೇಮಸ್. ಆದರೆ, ದುರಂತ ಅಂದರೆ ಅದೇ ಪೆಪ್ಪರ್ ಕಲ್ಟಿವೇಶನ್ ಹಾಗೂ ಪ್ರೊಡಕ್ಷನ್ ಪ್ರೊಸೀಜರ್ ಕಾರ್ಮಿಕರ ಜೀವಗಳನ್ನೇ ಬಲಿ ಪಡೀತಿದೆ. ಪೆಪ್ಪರ್ ಕೊಯ್ಲು ಮಾಡೋ ಕಾರ್ಮಿಕ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಕೆಲಸ ಮಾಡೋ ಪರಿಸ್ಥಿತಿ ಇದೀಗ ಕೊಡಗಲ್ಲಿ ನಿರ್ಮಾಣವಾಗಿದೆ. ಆಶ್ವರ್ಯ ಆದರೂ ಇದು ಸತ್ಯ. ಪೆಪ್ಪರ್ ಕೊಯ್ಲಿಗೆ ಬಳಸೋ ಅಲ್ಯೂಮೀನಿಯಂ ಲ್ಯಾಡರ್, ಅಂದ್ರೆ ಏಣಿಗಳು ಕಾರ್ಮಿಕರ ಜೀವಗಳನ್ನು ಬಲಿ ಪಡೀತಿವೆ. ಈ ಕುರಿತ ಎಕ್ಲೂಸೀವ್ ರಿಪೋರ್ಟ್ ಇಲ್ಲಿದೆ.
ಹೊಟ್ಟೆಪಾಡಿಗೆ ಅಂತ ಬಂದು ಸುಟ್ಟು ಕರಕಲಾಗಿರೋ ಕಾರ್ಮಿಕರು.ತಮ್ಮವರನ್ನ ಕಳಕೊಂಡು ಕಣ್ಣೀರಿಡ್ತಿರೋ ಕುಟುಂಬಗಳು.ಅತ್ತ ಪರಿಹಾರ ಸಿಗದೆ ಇತ್ತ ದಿನಗೂಲಿಯೂ ದೊರಕದೇ ಕಂಗಾಲಾಗಿರೋ ಅಮಾಯಕ ಜೀವಗಳು.. ಇಂತಹ ದೃಷ್ಯಗಳಿಗೆ ದಿನವೂ ಸಾಕ್ಷಿಯಾಗ್ತಿರೋದು ಕೊಡಗು ಜಿಲ್ಲೆ.
ಹೌದು... ಹೇಳಿ ಕೇಳಿ ಕೊಡಗು ಜಿಲ್ಲೆ ಪೆಪ್ಪರ್ ಅಂದರೆ ಕಾಳುಮೆಣಸು ಉತ್ಪಾದನೆಯಲ್ಲಿ ದೇಶ-ವಿದೇಶಗಳಲ್ಲೂ ಹೆಸರುವಾಸಿ. ಕೊಡಗಿನಲ್ಲಿ ಸಿಗುವ ಗುಣಮಟ್ಟದ ಪೆಪ್ಪರ್ ಬೇರೆಲ್ಲೂ ಸಿಗಲ್ಲ. ಆದರೆ, ಅಂತಹ ಪೆಪ್ಪರ್ ನಿಮ್ಮ ಅಡಿಗೆ ಮನೆ ಸೇರೋದ್ರೊಳಗೆ ಅದೆಷ್ಟೋ ಅಮಾಯಕ ಜೀವಗಳನ್ನ ಬಲೀ ಪಡೀತಿದೆ. ಆಶ್ಚರ್ಯ ಆದರೂ ಇದು ಸತ್ಯ. ಕೊಡಗಿನ ಪೆಪ್ಪರ್ ಪ್ಲಾಂಟೇಶನ್ ನಲ್ಲಿ ಹೊಟ್ಟೆ ಪಾಡಿಗೆ ದುಡಿಯೋ ಕಾರ್ಮಿಕರು ಪೆಪ್ಪರ್ ಕೊಯ್ಲಿಗೆ ಬಳಸೋ ಅಲ್ಯೂಮೀನಿಯಂ ಏಣಿಗಳಿಂದ ತಮ್ಮ ಪ್ರಾಣವನ್ನೇ ಒತ್ತೆ ಇಡ್ತಿದಾರೆ. ಪೆಪ್ಪರ್ ಪ್ಲಾಂಟೇಷನ್ ಒಳಗೆ ಹಾದು ಹೋಗಿರೋ ಕರೆಂಟ್ ವೈರ್ ಗಳು ಕಾರ್ಮಿಕರು ಬಳಸೋ ಅಲ್ಯೂಮೀನಿಯಂ ಲ್ಯಾಡರ್ ಗೆ ತಾಗಿ ಅವರ ಪ್ರಾಣವನ್ನು ತೆಗೀತಿವೆ. ಅದನ್ನ ಖುದ್ದು ತೊಟದ ಮಾಲಿಕರೂ ಸಹ ಒಪ್ಕೊತೀದಾರೆ. ಆದ್ರೆ ಅದ್ರ ಆಲ್ಟರ್ ನೇಟಿವ್ ಆಗಿರೋ ನಾನ್ ಕಂಡಕ್ಟರ್ ಏಣಿಗಳನ್ನು ಹೆಚ್ಚು ಹಣ ಆಗುತ್ತೆ ಅನ್ನೋ ರೀಜನ್ ಕೊಟ್ಟು ಬಳಸ್ತಿಲ್ಲ.
ಕಳೆದ ನಾಲ್ಕು ವರ್ಷದಲ್ಲಿ ಒರೋಬ್ಬರಿ ೩೫ಕ್ಕೂ ಅಧಿಕ ಕಾರ್ಮಿಕರು ಅಲ್ಯೂಮೀನಿಯಂ ಲ್ಯಾಡರ್ ಬಳಸಿ ಪೆಪ್ಪರ್ ಕೊಯ್ಲು ಮಾಡುವಾಗ ಪ್ರಾಣ ತೆತ್ತಿದ್ದಾರೆ. ಇದನ್ನ ಸೀರಿಯಸ್ ಆಗಿ ತಗೊಂಡಿರೋ ಕೊಡಗು ಜಿಲ್ಲಾಧಿಕಾರಿ ಅನೀಸ್ ಜಾಯ್ ಕಣ್ಮಣಿ ಅಲ್ಯೂಮೀನಿಯಂ ಲ್ಯಾಡರ್ ಬದಲಿಗೆ ಫೈಬರ್ ಲ್ಯಾಡರ್ ಬಳಸಿ ಅಂತ ಜಿಲ್ಲೆಯ ತೋಟದ ಮಾಲಿಕರಲ್ಲಿ ಮನವಿ ಮಾಡಿದ್ದಾರೆ.
ಅಲ್ಯೂಮೀನಿಯಂ ಲ್ಯಾಡರ್ ಬದಲಿಗೆ ಫೈಬರ್ ಲ್ಯಾಡರ್ ಬಳಸಿದ್ದೇ ಆದಲ್ಲಿ ಯಾವ ಕಾರ್ಮಿಕ ಕೂಡ ತನ್ನ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡ್ಬೇಕಾಗಿಲ್ಲ. ಈ ನಿಟ್ಟಿನಲ್ಲಿ ಜಾಗೃತಿಗೆ ಮುಂದಾಗಿರೋ ಜಿಲ್ಲಾಧಿಕಾರಿಗಳು ದಯವಿಟಟ್ಟು ಫೈಬರ್ ಹಾಗೂ ಬಿದಿರಿನ ಏಣಿಗಳನ್ನ ಬಳಸಿ ಕಾರ್ಮಿಕರ ಪ್ರಾಣ ಉಳಿಸಿ ಅಂತ ಪ್ರಕಟಣೆ ಹೊರಡಿಸಿ ಮನವಿ ಮಾಡಿದ್ದಾರೆ. ಜಿಲ್ಲೆಯ ಕೆಲ ತೋಟಗಳಲ್ಲಿ ಈ ಫೈಬರ್ ಏಣಿಗಳನ್ನ ಬಲಸಲಾಗ್ತಿದ್ದು, ತೋಟದೊಳಗೆ ಕರೆಂಟ್ ಲೈನ್ ಹಾದು ಹೋಗಿದ್ರೂ, ಅದಕ್ಕೆ ಈ ಫೈಬರ್ ಏಣಿಗಳು ತಾಗಿದ್ರೂ ಕಾರ್ಮಿಕರಿಗೆ ಏನೂ ತೊಂದರೆ ಆಗಲ್ಲ ಅನ್ನೋದು ಡಿಸಿ ಮನವಿ ಮಾಡಿದ್ದಾರೆ.
ಪೆಪ್ಪರ್ ಕೊಯ್ಲು ಸಂದರ್ಭ ಕರೆಂಟ್ ವೈರ್ ಗೆ ಅಲ್ಯೂಮೀನಿಯಂ ಏಣಿ ತಾಗಿ ಕಾರ್ಮಿಕರು ದುರ್ಮರಣಕ್ಕೀಡಾದ್ರೆ ಅದಕೆ ಪರಿಹಾರ ಕೊಡೋಕಾಗಲ್ಲ. ವಿದ್ಯುತ್ ಇಲಾಖೆ ಆಗ್ಲೀ ಸರ್ಕಾರವಾಗ್ಲಿ ಅದಕ್ಕೆ ಪರಿಹಾರ ಕೊಡೋಕೆ ಬರಲ್ಲ, ಇನ್ನು ತೋಟದ ಮಾಲಿಕರು ಕಾರ್ಮಿಕ ಕುಟುಂಬಗಳಿಗೆ ಪರಿಹಾರ ಕೊಟ್ರೆ ಆಯ್ತು ಇಲ್ಲಾಂದ್ರೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೊಡಗು ಜಿಲ್ಲಾಡಳಿತ ಕೂಡ ಅಲ್ಯೂಮೀನಿಯಂ ಏಣಿಗಳನ್ನ ಬ್ಯಾನ್ ಮಾಡೋ ರೈಟ್ಸ್ ಇಲ್ದೆ, ಅತ್ತ ಕಾರ್ಮಿಕರ ಪ್ರಣವನ್ನುಳಿಸೋಕೆ ಆಗ್ದೇ ಹೆಣಗಾಡ್ತಿದೆ. ಆದ್ರೆ ಪೆಪ್ಪರ್ ಪ್ಲಾಂಟೇಷನ್ ಮಾಲಿಕರು ಕಾರ್ಮಿಕರ ಹಿತದೃಷ್ಟಿಯಿಂದ ಅಲ್ಯೂಮೀನಿಯಂ ಏಣಿ ಬದಲಿಗೆ ಫೈಬರ್ ಹಾಗೂ ಬ್ಯಾಂಬೂ ಏಣಿಗಳನ್ನ ಬಳಸಿದ್ರೆ ಕಾರ್ಮಿಕರ ಪ್ರಾಣ ಉಳಿಸಬಹುದು ಎಂಬುದು ಕೊಡಗು ಜಿಲ್ಲಾಡಳಿತದ ಸಜೆಷನ್.. ಇನ್ನಾದ್ರೂ ಎತ್ತೆಚ್ಚುಕೊಂಡು ಫೈಬರ್ ಹಾಗೂ ಬ್ಯಾಂಬೂ ಏಣಿಗಳನ್ನ ಬಳಸಿ ಕಾರ್ಮಿಕರ ಪ್ರಾಣವನ್ನ ಉಳಿಸ್ಲಿ ಅನ್ನೋದು ನಮ್ಮ ಆಶಯ.

ಬೈಟ್-1- ಬಿದ್ದಾಟಂಡ ತಮ್ಮಯ್ಯ, ಕಾಫಿ ಬೆಳೆಗಾರರು
ಬೈಟ್-2- ರಮೇಶ್, ತೋಟದ ಮಾಲಿಕ
ಬೈಟ್-3 ಅನೀಸ್ ಕಣ್ಮಣಿ ಜಾಯ್, ಕೊಡಗು ಜಿಲ್ಲಾಧಿಕಾರಿ

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.Body:0Conclusion:0

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.