ಮಡಿಕೇರಿ(ಕೊಡಗು): ಕೊರೊನಾ ಲಕ್ಷಣವಿರುವ ಹಾಗೂ ಸೋಂಕು ತಗುಲಿರುವ ರೋಗಿಗಳ ಆರೈಕೆಗೆ ಮಡಿಕೇರಿ ತಾಲೂಕಿನ ಗಾಳಿಬೀಡು ಸಮೀಪದ ಜವಾಹರ್ ನವೋದಯ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಆದ್ರೆ ಈ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಕೋವಿಡ್ ಕೇಂದ್ರದಲ್ಲಿ ಕುಡಿಯುವ ಬಿಸಿ ನೀರಿಗೂ ಹಾಹಾಕಾರ ಇದೆ. ಬಿಸಿ ನೀರು ಸಿಗದೆ ಓಪನ್ ಕಾಯಿಲ್ ಹೀಟರ್‌ನಲ್ಲಿ ಸೋಂಕಿತರು ನೀರನ್ನು ಕಾಯಿಸಿಕೊಳ್ಳುತ್ತಿದ್ದಾರೆ. ರೋಗಿಗಳೇ ಕಸ ಗುಡಿಸಿ, ನೆಲವನ್ನು ಒರೆಸುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ.
ಮಳೆ ಬಂದರೆ ಈ ಕೇಂದ್ರ ಸಂಪೂರ್ಣ ಸೋರುತ್ತಿದೆ. ಶುಚಿತ್ವವನ್ನೂ ಕಾಪಾಡುವುದಿಲ್ಲ ಎಂದು ಇಲ್ಲಿನ ಅವ್ಯವಸ್ಥೆ ಬಗ್ಗೆ ವಿಡಿಯೋ ಮಾಡಿ ಸೋಂಕಿತರು ಅಳಲು ತೋಡಿಕೊಂಡಿದ್ದಾರೆ.