ETV Bharat / state

ಪೂರ್ವಜರಿಂದ ಬಂದಿರುವ ಬೇಟೆಯಾಡಿದ ಪ್ರಾಣಿಗಳ ಉತ್ಪನ್ನ ಬಳಕೆ ಅಪರಾಧವಲ್ಲ: ಸಿಎಂ ಸಲಹೆಗಾರ ಎ.ಎಸ್.​ಪೊನ್ನಣ್ಣ

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಪೂರ್ವಜರಿಂದ ಪ್ರಾಣಿಗಳ ಉತ್ಪನ್ನಗಳು ಬಂದಿದ್ದರೆ ಅದು ಅಪರಾಧವಲ್ಲ ಎಂದು ಹೇಳಿದ್ದಾರೆ.

ಸಿಎಂ ಸಲಹೆಗಾರ ಎ ಎಸ್ ​ಪೊನ್ನಣ್ಣ
ಸಿಎಂ ಸಲಹೆಗಾರ ಎ ಎಸ್ ​ಪೊನ್ನಣ್ಣ
author img

By ETV Bharat Karnataka Team

Published : Oct 31, 2023, 10:51 PM IST

ಮಡಿಕೇರಿ: ಪೂರ್ವಜರಿಂದ ಬಂದ ಬೇಟೆಯಾಡಿದ ಪ್ರಾಣಿಗಳ ಉತ್ಪನ್ನಗಳನ್ನು ಬಳಸುವುದು ಅಪರಾಧವಲ್ಲ ಎಂದು ಮುಖ್ಯಮಂತ್ರಿಗಳ ಸಲಹೆಗಾರ ಎ.ಎಸ್.​ಪೊನ್ನಣ್ಣ ತಿಳಿಸಿದರು. ರಾಜ್ಯದಲ್ಲಿ ಹಲವರ ಬಳಿ ಹುಲಿ ಉಗುರು ಪತ್ತೆ ಪ್ರಕರಣ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕೊಡಗಿನಲ್ಲಿ ಪುರಾತನ ಕಾಲದಿಂದಲೇ ವನ್ಯಜೀವಿಗಳ ದೇಹದ ಭಾಗಗಳಿವೆ. ಜಿಲ್ಲೆಯಲ್ಲಿ ಜಿಂಕೆ ಕೊಂಬು, ನವಿಲುಗರಿ ಇಟ್ಟು ನಡೆಯುವ ಹಬ್ಬಗಳಲ್ಲಿ ಪೂಜೆ ಮಾಡುವ ಪಂರಂಪರೆ ಇದೆ. ಈ ಪರಂಪರೆಯಿಂದ ಬಂದ ಪ್ರಾಣಿ ಉತ್ಪನ್ನಗಳ ಬಗ್ಗೆ ಆತಂಕ ಬೇಡ ಎಂದು ಹೇಳಿದರು.

ವನ್ಯಜೀವಿ ಬೇಟೆ ನಿಷೇಧ ಕಾನೂನಿನನ್ವಯ ಬೇಟೆ ಮಾಡಿದ ಉತ್ಪನ್ನಗಳನ್ನು ಬಳಸಿದರೆ ಅಪರಾಧ. ಆದರೆ ಪೂರ್ವಜರಿಂದ ಬಂದಿದ್ದದರೆ ಅದು ಅಪರಾಧ ಅಲ್ಲ. ಜಿಂಕೆ ಕೊಂಬು ಮನೆಯಲ್ಲಿ ಇಡಬಹುದು. ನವಿಲು ಗರಿ ತಾನಾಗಿ ಬಿದ್ದಿದ್ದು ಇಟ್ಟುಕೊಂಡರೆ ಅಪರಾಧ ಅಲ್ಲ. ಇದಕ್ಕಾಗಿ ಜನರು ಆತಂಕಪಡುವ ಅಗತ್ಯ ಇಲ್ಲ. ಆದ್ದರಿಂದ ಜಿಲ್ಲೆಯ ಜನರು ಚಿಂತಿಸಬೇಡಿ. ಈ ಬಗ್ಗೆ ಕಾನೂನಾತ್ಮಕ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳೋಣ. ಕೋರ್ಟ್​ನಲ್ಲಿ ಈ ಪ್ರಕರಣಗಳು ಇತ್ಯರ್ಥವಾಗಿ ಗೊಂದಲ ಪರಿಹಾರ ಆಗುವ ತನಕ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದರು.

ಹುಲಿ ಉಗುರು ಮಾದರಿ ಪೆಂಡೆಂಟ್​ ಪ್ರಕರಣ: ಜಗ್ಗೇಶ್ ಪ್ರಕರಣದಲಿ ಸದ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮುಂದಿನ ಆದೇಶದವರೆಗೂ ಅರಣ್ಯಾಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ಹೇಳುವ ಮೂಲಕ ಕೊಡಗಿನ ಜನರ ಸಂಸ್ಕೃತಿಗೆ ಪೊನ್ನಣ್ಣ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ: ಚಿರತೆ, ಜಿಂಕೆ ಚರ್ಮ ಪತ್ತೆ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಶಾಖಾದ್ರಿ ಮನೆ ಬಾಗಿಲಿಗೆ ನೋಟಿಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.