ಕೊಡಗು: ಗಾಂಜಾ ಮಾರಾಟ ಮಾಡುತ್ತಿದ್ದ ಆರು ಮಂದಿಯನ್ನು ಮಡಿಕೇರಿ ಡಿಸಿಐಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 50 ಸಾವಿರ ಮೌಲ್ಯದ ಗಾಂಜಾ, 35,760 ರೂ. ನಗದು ವಶಕ್ಕೆ ಪಡೆಯಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ನಗರದ ರಾಣಿಪೇಟೆಯ ಮನೆಯೊಂದರಲ್ಲಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಗಾಂಜಾ ವಶಕ್ಕೆ ಪಡೆದು, ಆರೋಪಿಗಳನ್ನು ಬಂಧಿಸಿದ್ದಾರೆ. ಎಂ.ಎ.ಅಸ್ಕರ್ ಆಲಿ, ಅಬ್ದುಲ್ ರಹೀಂ, ಎಂ.ಜಬೀವುಲ್ಲಾ, ಸಫಾನ್ ಅಹ್ಮದ್, ನೌಷಾದ್ ಆಲಿ, ಡಿ.ಆರ್.ಸುರೇಶ್ ಬಂಧಿತ ಆರೋಪಿಗಳಾಗಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಡಿಕೇರಿ ಡಿಸಿಐಬಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬೈಕ್ ಖರೀದಿಸಲು ಹಣ ನೀಡದ್ದಕ್ಕೆ ಹೆತ್ತವರ ಮೇಲೆಯೇ ಹಲ್ಲೆ.. ಬೆಂಗಳೂರಲ್ಲಿ ಮಗ ಅರೆಸ್ಟ್