ಮಡಿಕೇರಿ: ಯುಕೆ ಹಾಗೂ ಕೆನಡಾ ರಾಷ್ಟ್ರಗಳಿಂದ ಬಂದ 11 ಜನರ ಮಾಹಿತಿಯನ್ನು ಕಲೆ ಹಾಕಿ ಅವರ ಗಂಟಲು ದ್ರವವನ್ನು ಆರ್‌ಟಿಪಿಸಿಆರ್ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ಡಿಹೆಚ್‌ಒ ಮೋಹನ್ ಕುಮಾರ್ ತಿಳಿಸಿದ್ದಾರೆ.
ವಿರಾಜಪೇಟೆ ತಾಲೂಕಿನಲ್ಲಿ 7, ಮಡಿಕೇರಿ ತಾಲೂಕಿನ 3 ಹಾಗೂ ಸೋಮವಾರಪೇಟೆ ತಾಲೂಕಿಗೆ ಇಬ್ಬರು ವಿದೇಶದಿಂದ ಬಂದಿದ್ದಾರೆ. ಈಗಾಗಲೇ ಅವರನ್ನು ಸಂಪರ್ಕಿಸಿ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಿದ್ದೇವೆ ಎಂದರು.
ಇನ್ನೂ ಹನ್ನೊಂದು ಜನರಲ್ಲಿ ಮೂವರು ಚಿಕ್ಕಮಗಳೂರು, ಮಂಡ್ಯ ಹಾಗೂ ಮಂಗಳೂರು ಜಿಲ್ಲೆಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಈಗಾಗಲೇ ಈ ಕುರಿತಾದ ಮಾಹಿತಿಯನ್ನು ಆಯಾ ಡಿಹೆಚ್‌ಒಗಳಿಗೆ ತಿಳಿಸಿದ್ದೇವೆ. ಅವರೆಲ್ಲರೂ ಆರೋಗ್ಯವಾಗಿದ್ದು, ಇನ್ನಿಬ್ಬರ ಗಂಟಲು ದ್ರವವನ್ನು ಸಂಜೆ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.