ಕೊಡಗು : 9 ಮಂದಿ ಫೆಬ್ರವರಿ 2ರಂದು ಗುಜರಾತ್‌ನಿಂದ ವಿರಾಜಪೇಟೆಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮುಂಬೈನಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದವರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ ಪೆನ್ನೇಕರ್ ತಿಳಿಸಿದರು.
ಇಲ್ಲಿನ ವಿರಾಜಪೇಟೆ ಮಸೀದಿಗೆ ಬಂದು 40 ದಿನ ಧಾರ್ಮಿಕ ಪ್ರವಚನದಲ್ಲಿ ಭಾಗವಹಿಸಿದ್ದರು. ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಯಾರೂ ಮನೆಯಿಂದ ಹೊರಗೆ ಹೋಗಿರಲಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಅವರಿಗೆ ಬಾಡಿಗೆ ಕೊಟ್ಟವರು ಒಳಗೊಂಡಂತೆ ಒಟ್ಟು 10 ಜನರನ್ನು ಜಿಲ್ಲಾ ಆರೋಗ್ಯ ತಡೆ ಕ್ವಾರಂಟೈನ್‌ನಲ್ಲಿ ನಿಗಾ ವಹಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇವರು ವಾಸ್ತವ್ಯ ಮಾಡಿದ ಸುತ್ತಮುತ್ತ ಜನರನ್ನು ನಿಗಾವಹಿಸಲಾಗಿದೆ. ಯಾರಿಗೂ ರೋಗದ ಲಕ್ಷಣಗಳಿಲ್ಲ. ಇವರೆಲ್ಲ ವೈದ್ಯರೊಬ್ಬರ ಬಳಿ ತಪಾಸಣೆ ಮಾಡಿಸಿಕೊಂಡಿದ್ದೇವೆ ಎಂದಿದ್ದಾರೆ. ಒಂದು ವೇಳೆ ತಪಾಸಣೆಗೊಳಗಾಗದಿದ್ದರೆ ಎಲ್ಲರ ಮೇಲೂ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದೇವೆ ಎಂದರು.