ಕಲಬುರಗಿ : ಜಮೀನಿನ ವಿಚಾರಕ್ಕೆ ಯುವಕನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಅಫಜಲಪುರ ತಾಲೂಕಿನ ಗೌರ್ ಕೆ ಗ್ರಾಮದಲ್ಲಿ ನಡೆದಿದೆ. ಶಿರವಾಳ ಗ್ರಾಮದ ಅಕ್ಷಯ್ಕುಮಾರ್ ಕ್ಷತ್ರಿ (25) ಎಂಬಾತನೆ ಹತ್ಯೆಯಾದ ಯುವಕನಾಗಿದ್ದಾನೆ.
ಗೌರ ಬಿ ಗ್ರಾಮದ ನೀಲಪ್ಪ, ಮಲ್ಲು ಬಂಡೆ ಎಂಬುವರ ಜಮೀನನ್ನು ಅಕ್ಷಯ್ ಪಾಲುದಾರಿಕೆ ಪಡೆದು ಉಳುಮೆ ಮಾಡುತ್ತಿದ್ದ. ಅವಧಿ ಮುಗಿದ ನಂತರ ಜಮೀನಿನಲ್ಲಿ ಆತ ಹಾಕಿದ್ದ ಟಿನ್‌ಶೆಡ್ ಬಿಟ್ಟುಕೊಡಲು 10 ಸಾವಿರ ರೂಪಾಯಿ ಹಣ ಕೊಡಬೇಕು ಎಂದು ಒಪ್ಪಂದವಾಗಿತ್ತು.
ಆದರೆ, ದುಡ್ಡು ಕೊಡುತ್ತೇವೆ ಬಾ ಅಂತಾ ಅಕ್ಷಯ್ನನ್ನು ಕರೆಯಿಸಿಕೊಂಡು ನೀಲಪ್ಪ ಬಂಡೆ ಮತ್ತು ಮಲ್ಲು ಬಂಡೆ ಸೇರಿ ಕೊಲೆಗೈದಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಎಸ್ಪಿ ಇಶಾ ಪಂತ್ ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಆಸ್ತಿ ವಿವಾದದ ಪ್ರಕರಣದಲ್ಲಿ ಸೋಲು : ಹೈಕೋರ್ಟ್‌ನಲ್ಲಿಯೇ ಚಾಕು ಬಳಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ