ಕಲಬುರಗಿ: ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹುಟ್ಟುಹಬ್ಬದ ಆಚರಣೆ ವೇಳೆ ತಲ್ವಾರ್ ಹಾಗೂ ಚಾಕು ಹಿಡಿದು ಯುವಕರು ಕುಣಿದು ಕುಪ್ಪಳಿಸಿದ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮಂಗಳವಾರ ಸೋಹಿಲ್ ಎಂಬಾತನ ಹುಟ್ಟುಹಬ್ಬದ ಆಚರಣೆಯ ವೇಳೆ ಆರೋಪಿಗಳಾದ ತಲಹಾ, ಇಮ್ರಾನ್, ಜಹೀರ್ ಮತ್ತಿತರರು ತಲ್ವಾರ್, ಚಾಕುಗಳನ್ನು ಹಿಡಿದು ಕುಣಿದಿದ್ದಾರೆ. ಅಲ್ಲದೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಈಗಾಗಲೇ ಏಳು ಜನರನ್ನು ಬಂಧಿಸಿದ್ದಾರೆ.
ಇಮ್ರಾನ್, ತಬ್ರೇಜ್, ರಸೀದ್, ಅಫರೋಜ್, ತಲಹಾ, ಸೋಹಿಲ್ ಹಾಗೂ ಜಹೀರ್ ಒಟ್ಟು ಏಳು ಜನ ಆರೋಪಿಗಳ ವಿರುದ್ಧ ಐಪಿಸಿ ಕಲಂ 107 ಅನ್ವಯ ಕೇಸ್ ಜಡಿದು ಜೈಲಿಗೆ ಅಟ್ಟಲಾಗಿದೆ. ಬಂಧಿತರಲ್ಲಿ ರೌಡಿ ಶೀಟರ್ ಕೂಡಾ ಇದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಯಡಿಯೂರಪ್ಪನವರ ಸಿಡಿ ಡಿಕೆಶಿ ಬಳಿ ಇದೆ: ಮತ್ತೊಂದು ಬಾಂಬ್ ಸಿಡಿಸಿದ ಯತ್ನಾಳ್
ಸಾರ್ವಜನಿಕರಿಗೆ ತೊಂದರೆ ಮಾಡಿ ರಸ್ತೆ ಮೇಲೆ ಬರ್ತ್ ಡೇ ಆಚರಣೆ ಮಾಡುವುದು, ಮಾರಕಾಸ್ತ್ರ ಹಿಡಿದು ಕುಣಿಯುವುದು ಅಥವಾ ಓಡಾಡುವುದು ಮಾಡಿದರೆ ತಕ್ಕಶಾಸ್ತಿ ಮಾಡುವುದಾಗಿ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.