ಕಲಬುರಗಿ: ನಗರದ ಕ್ರೈಂ ಬ್ರಾಂಚ್ ಪಿಎಸ್ಐ ಯಶೋಧಾ ಕಟಕೆ ಅವರು ಸಮಾಜಮುಖಿ ಮಾನವೀಯ ಕಾರ್ಯದ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಇವರು ತಮಗೆ ಬಿಡುವು ಸಿಕ್ಕಾಗ ಸಾರ್ವಜನಿಕ ಉದ್ಯಾನವನಕ್ಕೆ ತೆರಳುತ್ತಾರೆ. ಈ ವೇಳೆ ಅಲ್ಲಿರುವ ಮಣ್ಣಿನ ಅರವಟ್ಟಿಗೆಗಳಿಗೆ ನೀರು, ಜೋಳ, ಗೋಧಿ, ಸಜ್ಜೆ, ರವಾ ಹೀಗೆ ಇತರ ದಿನಸಿ ಪದಾರ್ಥಗಳನ್ನು ಹಾಕುತ್ತಾರೆ. ಈ ಮುಖೇನ ಪಕ್ಷಿ ಸಂಕುಲವನ್ನು ಕಾಪಾಡಲು ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಬೇಸಿಗೆಯ ತಾಪಮಾನ ಹೆಚ್ಚಾಗಿದೆ. ಜನರ ಜೊತೆ ಮೂಕ ಪ್ರಾಣಿ, ಪಕ್ಷಿಗಳ ಬವಣೆ ಹೇಳತೀರದಾಗಿದೆ. ಮಹಿಳಾ ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಕೆಲವು ಸಂಘಟನೆ ಮುಖಂಡರು, ಮಹಿಳೆಯರು ಸಾಥ್ ನೀಡಿದ್ದಾರೆ.