ETV Bharat / state

ನಾಳೆ  ರಸ್ತೆಗಿಳಿಯುವಂತಿಲ್ಲ: ಕಲಬುರಗಿ ಪೊಲೀಸ್ ಆಯುಕ್ತ ಎಚ್ಚರಿಕೆ - Kalaburagi Police Commissioner

ಭಾನುವಾರದ ಲಾ‌ಕ್​​​​​​ಡೌನ್​​​ ಹಿನ್ನೆಲೆ ಖಡಕ್ ಸಂದೇಶ ರವಾನಿಸಿರುವ ಕಲಬುರಗಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್, ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಎಲ್ಲ ವ್ಯಾಪಾರ-ವಹಿವಾಟು ಬಂದ್ ಮಾಡಲಾಗುತ್ತದೆ ಎಂದಿದ್ದಾರೆ.

warning from kalaburagi police commissioner
ಕಲಬುರಗಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್
author img

By

Published : May 23, 2020, 8:23 PM IST

Updated : May 23, 2020, 8:29 PM IST

ಕಲಬುರಗಿ: ಕೇಂದ್ರ ಸರ್ಕಾರದ ಆದೇಶದ ಅನ್ವಯ ಭಾನುವಾರ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟ ಹೊರೆತುಪಡಿಸಿ ಎಲ್ಲ ವ್ಯಾಪಾರ - ವಹಿವಾಟು ಸ್ಥಗಿತಗೊಂಡಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಹೇಳಿದ್ದಾರೆ.

ಮೆಡಿಕಲ್, ಕಿರಾಣಿ, ಆಸ್ಪತ್ರೆ ತೆರೆಯಲು ಮಾತ್ರ ಅನುಮತಿ ನೀಡಲಾಗಿದೆ. ಆಟೋ ಸಂಚಾರ, ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಅನಾವಶ್ಯಕವಾಗಿ ರಸ್ತೆಗೆ ಸಾರ್ವಜನಿಕರು ಬರುವಂತಿಲ್ಲ ಎಂದು ಖಡಕ್​ ಆದೇಶ ನೀಡಿದ್ದಾರೆ.

ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ:

ರಂಜಾನ್ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಶುಭಕೋರಿದ ಪೊಲೀಸ್ ಆಯುಕ್ತರು, ಹಬ್ಬದ ದಿನವೆಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಂತಿಲ್ಲ. ಪರಸ್ಪರ ದೈಹಿಕ ಶುಭಕೋರುವಂತ್ತಿಲ್ಲ. 144 ನಿಷೇದಾಜ್ಞೆ ಜಾರಿಯಲ್ಲಿದ್ದು ಸಾರ್ವಜನಿಕರು ಗುಂಪು ಸೇರುವಂತಿಲ್ಲ ಎಂದರು.

ಪೊಲೀಸ್ ಬಂದೋಬಸ್ತ್:

ರಂಜಾನ್ ಬಂದೋಬಸ್ತ್ ಕರ್ತವ್ಯಕ್ಕೆ ಡಿಸಿಪಿ-1, ಎಸಿಪಿ-5, ಪಿಐ- 17, ಪಿಎಸ್ಐ- 5, ಎಎಸ್ಐ- 50, ಪಿಸಿ- 350, ಹೋಮ್​ಗಾರ್ಡ್- 250, ಕೆಎಸ್‌ಆರ್‌ಪಿ -3 ತುಕಡಿ, ಸಿಎಆರ್-9 ತುಕಡಿ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸಿಸಿ ಹಾಗೂ ಡ್ರೋನ್​​ ಕ್ಯಾಮರಾ ಕಣ್ಗಾವಲು ಇರಿಸಲಾಗಿದೆ ಎಂದು ಹೇಳಿದರು.

Last Updated : May 23, 2020, 8:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.