ETV Bharat / state

ಕೊರೊನಾ ನಡುವೆ ರೈತರಿಗೆ ಮತ್ತೊಂದು ಆತಂಕ ಶುರು: ರಾಸುಗಳಿಗೆ ಚರ್ಮಗಂಟು ರೋಗ - ಕಲಬುರಗಿ ಸುದ್ದಿ

ದನಗಳ ಮೈಮೇಲೆ ಗುಳ್ಳೆಗಳು ಮತ್ತು ಬಾವು ಬರುತ್ತವೆ. ಸ್ವಲ್ಪ ಮಟ್ಟಿಗೆ ಜ್ವರ ಹಾಗೂ ಮೇವು ನೀರು ತೈಜಿಸುತ್ತವೆ. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ರೈತರು ತಕ್ಷಣ ಸಮೀಪದ ಪಶು ವೈದ್ಯಕೀಯ ಸಂಸ್ಥೆಯ ಸಿಬ್ಬಂದಿ ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಕೊಡಿಸಿ. ಉಪಚಾರ ಮಾಡುವುದರ ಮೂಲಕ ರೋಗದ ಹತೋಟಿ ಮಾಡಬಹುದಾಗಿದೆ.

viral skin disease
ಚರ್ಮಗಂಟು ರೋಗ
author img

By

Published : Sep 25, 2020, 3:37 AM IST

ಕಲಬುರಗಿ: ಕೊರೊನಾ ವೈರಸ್​​ನಿಂದಾಗಿ ಈಗಾಗಲೇ ಕಂಗಾಲಾಗಿರುವ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಚರ್ಮಗಂಟು ರೋಗ (ಎಲ್ಎಸ್​​ಡಿ) ಕಾಣಿಸಿಕೊಂಡಿದೆ.

ಚರ್ಮಗಂಟು ರೋಗದ ಹತೋಟಿಗಾಗಿ ರೈತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಗುರುಶಾಂತಗೌಡ ಪಾಟೀಲ್ ತಿಳಿಸಿದ್ದಾರೆ.

ದನಗಳ ಮೈಮೇಲೆ ಗುಳ್ಳೆಗಳು ಮತ್ತು ಬಾವು ಬರುತ್ತವೆ. ಸ್ವಲ್ಪ ಮಟ್ಟಿಗೆ ಜ್ವರ ಹಾಗೂ ಮೇವು ನೀರು ತ್ಯಜಿಸುತ್ತವೆ. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ರೈತರು ತಕ್ಷಣ ಸಮೀಪದ ಪಶು ವೈದ್ಯಕೀಯ ಸಂಸ್ಥೆಯ ಸಿಬ್ಬಂದಿಯನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಉಪಚಾರ ಮಾಡುವುದರ ಮೂಲಕ ರೋಗದ ಹತೋಟಿ ಮಾಡಬಹುದು ಎಂದರು.

ಈ ರೋಗ ಕುರಿತು ರೈತರು ಭಯಪಡಬಾರದು. ಜಾನುವಾರುಗಳ ಸ್ಥಳದಲ್ಲಿ ಸೊಳ್ಳೆ ಪರದೆಗಳ ಅಳವಡಿಕೆ, ಸ್ವಚ್ಛತೆ ಕಾಪಾಡುವುದು, ಸುತ್ತ-ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ರಾತ್ರಿ ಸಮಯದಲ್ಲಿ ಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಜಾನುವಾರುಗಳಿಗೆ ಉಣ್ಣೆ, ಸೊಳ್ಳೆಗಳ ಬಾದೆಯಿಂದ ರಕ್ಷಿಸಿದ್ದಲ್ಲಿ ರೋಗ ಜಾನುವಾರುಗಳಿಂದ ಜಾನುವಾರಿಗೆ ಹರಡುವದಿಲ್ಲ ಎಂದರು.

ಚರ್ಮಗಂಟು ರೋಗದ ಲಕ್ಷಣ ಕಂಡುಬಂದಲ್ಲಿ ರೈತರು ಕೂಡಲೇ ತಮ್ಮ ಸಮೀಪದ ಪಶು ವೈದ್ಯಕೀಯ ಸಂಸ್ಥೆಯ ಸಿಬ್ಬಂದಿಯವರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಕೊಡಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ ವಿ.ಹೆಚ್. ಹನುಮಂತಪ್ಪ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.