ಸೇಡಂ: ಚಿಂಚೋಳಿ ತಾಲೂಕಿನ ನಿಡಗುಂದ ಗ್ರಾಮದ ಜನರು ವೀರಭದ್ರೇಶ್ವರ ಜಾತ್ರೆ ಆಚರಣೆ ಬದಲಿಗೆ 100 ಸಸಿಗಳನ್ನು ನೆಟ್ಟು ಮಾದರಿ ಹೆಜ್ಜೆ ಇರಿಸಿದ್ದಾರೆ.
ಲಾಕ್ಡೌನ್ನಿಂದ ಸಾಮೂಹಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದ್ದು, ಗ್ರಾಮದ ಗೆಳೆಯರ ಬಳಗದ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಸಸಿ ನೆಡುವ ಕಾರ್ಯಕ್ರಮಕ್ಕೆ ಸುಲೇಪೇಟ ಪಿಎಸ್ಐ ತಿಮ್ಮರಾಯ ಚಾಲನೆ ನೀಡಿದರು.
ಪಿಹೆಚ್‌ಸಿ ವೈದ್ಯಾಧಿಕಾರಿ ಶೃತಿ ರೆಡ್ಡಿ, ಮುಖಂಡರಾದ ಮುಕುಂದ ದೇಶಪಾಂಡೆ, ಬಸವರಾಜ ಕಪಾಳ, ಸತೀಶ್ ಸಜ್ಜನ, ಪ್ರವೀಣ ಕುಮಾರ ಸಿರೋಳ್ಳಿ, ದಿನೇಶ ರೆಡ್ಡಿ, ಸೋಮಣ್ಣ ಮಡಿವಾಳ, ಸಂಗಮೇಶ ನಿರ್ಣಿ, ಸುರೇಶ ಪೂಜಾರಿ, ಶಂಕರ, ಈರಣ್ಣ ಕೊಡ್ಲಿ, ಸುನೀಲ್ ಬಿರಾದರ, ಶ್ರೀನಾಥ ರೆಡ್ಡಿ ಪಾಲ್ಗೊಂಡಿದ್ದರು.