ಕಲಬುರಗಿ ಮಹಾನಗರ ಪಾಲಿಕೆಯಿಂದ ವಿಶೇಷ ಚೇತನರಿಗೆ ವಾಹನ ವಿತರಣೆ - kalburgi news
ಪಾಲಿಕೆ ನಿಧಿ ಹಾಗೂ ಉಳಿತಾಯ ಅನುದಾನದಡಿ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಅರ್ಹ 46 ಜನ ವಿಶೇಷ ಚೇತನರಿಗೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು ತ್ರಿಚಕ್ರ ವಾಹನಗಳನ್ನು ವಿತರಿಸಿದರು.

ಕಲಬುರಗಿ ಮಹಾನಗರ ಪಾಲಿಕೆಯಿಂದ ವಿಶೇಷಚೇತನರಿಗೆ ವಾಹನ ವಿತರಣೆ
ಕಲಬುರಗಿ: ಮಹಾನಗರ ಪಾಲಿಕೆ ವತಿಯಿಂದ ವಿಶೇಷಚೇತನರಿಗೆ ವಾಹನ ವಿತರಣೆ ಮಾಡಲಾಯಿತು.
2011-12 ರಿಂದ 2014-15ನೇ ಸಾಲಿನ ವರೆಗಿನ ಎಸ್.ಎಫ್.ಸಿ., ಪಾಲಿಕೆ ನಿಧಿ ಹಾಗೂ ಉಳಿತಾಯ ಅನುದಾನದಡಿ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಅರ್ಹ 46 ಜನ ವಿಶೇಷಚೇತನರಿಗೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು ತ್ರಿಚಕ್ರ ವಾಹನಗಳನ್ನು ನೀಡಿದರು.
ಜೇವರ್ಗಿ ರಸ್ತೆಯ ಮುಕ್ತಾ ಟಾಕೀಸ್ ಬಳಿಯ ವೆಂಕಟೇಶ್ವರ ಅಟೋಮೋಟಿಸ್ ಶೋರಂನಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ. ಜಾಧವ, ಉಪ ಆಯುಕ್ತ (ಆಡಳಿತ) ಎಂ.ಡಿ. ಸಾದತ್ ಸೇರಿದಂತೆ ಮಹನಗರ ಪಾಲಿಕೆ ಸಿಬ್ಬಂದಿ ಉಪಸ್ಥಿತರಿದ್ದರು.