ETV Bharat / state

ಕಲಬುರಗಿ: ಸಾಮಾನ್ಯ ಚಿಕಿತ್ಸೆಗೆ ಜಿಲ್ಲೆಯ 10 ಆಸ್ಪತ್ರೆಗಳು ಮೀಸಲು

ಕಲಬುರಗಿ ನಗರದ ಜಿಮ್ಸ್​ ಆಸ್ಪತ್ರೆಯನ್ನು ಕೊರೊನಾ ಚಿಕಿತ್ಸಾ ಆಸ್ಪತ್ರೆಯೆಂದು ಬಳಸಿಕೊಂಡಿರುವ ಹಿನ್ನಲೆಯಲ್ಲಿ, ನಗರದಲ್ಲಿ ಸರ್ಕಾರಿ ನೊಂದಾಯಿತವಾಗಿರುವ 10 ಆಸ್ಪತ್ರೆಗಳನ್ನು ಇತರೆ ಚಿಕಿತ್ಸೆಗೆ ಬಳಸಿಕೊಳ್ಳಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ. ಎ. ಜಬ್ಬಾರ್ ತಿಳಿಸಿದರು

author img

By

Published : Apr 19, 2020, 12:55 PM IST

kalburgi
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ. ಎ. ಜಬ್ಬಾರ್

ಕಲಬುರಗಿ : ಕೋವಿಡ್-19 ಚಿಕಿತ್ಸಾ ಆಸ್ಪತ್ರೆಯೆಂದು ಜಿಲ್ಲಾಸ್ಪತ್ರೆಯನ್ನು ಗುರುತಿಸಲಾಗಿದೆ, ಆದರೂ ಜಿಮ್ಸ್​ಗೆ ಇತರೆ ರೋಗಿಗಳು ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾವಣೆಯಾಗಿರುವ ಕಲಬುರಗಿಯ 10 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ. ಎ. ಜಬ್ಬಾರ್ ತಿಳಿಸಿದ್ದಾರೆ.

ನಗರದ ಸಂತ್ರಾಸವಾಡಿಯ ಮೆಡಿಕೇರ್ ಆಸ್ಪತ್ರೆ, ಜೆಸ್ಕಾಂ ಕಚೇರಿ ಹಿಂದುಗಡೆಯ ಚಿರಾಯು ಆಸ್ಪತ್ರೆ, ಸ್ಟೇಷನ್ ರಸ್ತೆಯಲ್ಲಿರುವ ಯುನೈಟೆಡ್ ಆಸ್ಪತ್ರೆ, ಸರ್ಕಾರಿ ಐಟಿಐ. ಕಾಲೇಜು ರಸ್ತೆಯಲ್ಲಿರುವ ಕಾಮರೆಡ್ಡಿ ಆಸ್ಪತ್ರೆ, ಎನ್​.ವಿ. ಮೈದಾನ ರಸ್ತೆಯ ಚಿರಂಜೀವಿ ಆಸ್ಪತ್ರೆ, ಖರ್ಗೆ ಪೆಟ್ರೋಲ್ ಬಂಕ್ ರಸ್ತೆಯಲ್ಲಿರುವ ಅನ್ವಿಕಾ ಆಸ್ಪತ್ರೆ, ಸೇಡಂ ರಸ್ತೆಯಲ್ಲಿರುವ ಬಸವೇಶ್ವರ ಬೋಧಕ ಆಸ್ಪತ್ರೆ, ಉಪ ಅರಣ್ಯಾ ಸಂರಕ್ಷಣಾಧಿಕಾರಿಗಳ ಕಚೇರಿ ಎದುರಿಗಿರುವ ಸತ್ಯಾ ಯುರೋಕೇರ್ ಆಸ್ಪತ್ರೆ, ಆರ್​ಟಿಒ ಕಚೇರಿ ಬಳಿಯಿರುವ ವಾತ್ಸಲ್ಯ ಆಸ್ಪತ್ರೆ, ಹಾಗೂ ಸ್ಟೇಷನ್ ರಸ್ತೆಯಲ್ಲಿರುವ ಕೆ.ಬಿ.ಎನ್. ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಇಲ್ಲಿ ಸಾಮಾನ್ಯ ಹಾಗೂ ದ್ವಿತೀಯ ಹಂತದ 291 ಚಿಕಿತ್ಸಾ ಕ್ರಮಗಳು ಲಭ್ಯವಿರುತ್ತವೆ ಎಂದರು.

ಸಾಮಾನ್ಯ ದ್ವಿತೀಯ ಹಂತದ ಚಿಕಿತ್ಸಾ ಕ್ರಮಗಳು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಒದಗಿಸಬೇಕೆಂದು ಸರ್ಕಾರದ ಆದೇಶವಿದ್ದರೂ ಕೂಡ, ಆರೋಗ್ಯ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ನಿಯಮ ಸಡಿಲಿಸಿ, ಖಾಸಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಪಡಿತರ ಚೀಟಿ, ಆಧಾರ್​ಕಾರ್ಡ್ ತೋರಿಸಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಇನ್ನೂ ಪಡಿತರ ಚೀಟಿ ಇಲ್ಲದ ರೋಗಿಗಳು ಮೇಲ್ಕಂಡ ನೊಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ವ್ಯವಸ್ಥೆ ಇದೆ. ಇಂತಹ ರೋಗಿಗಳಿಗೆ ಚಿಕಿತ್ಸೆ ಒದಗಿಸಿದ ಸಂದರ್ಭದಲ್ಲಿ ನೊಂದಾಯಿತ ಖಾಸಗಿ ಆಸ್ಪತ್ರೆಯವರು ರೋಗಿಗಳ ಚಿಕಿತ್ಸಾ ದಾಖಲೆಗಳನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ವೈದ್ಯಕೀಯ ಅಧೀಕ್ಷಕರಿಗೆ ಸಲ್ಲಿಸಿ, ಜಿಲ್ಲೆಯ ಆರೋಗ್ಯ ರಕ್ಷಾ ಸಮಿತಿಯಿಂದ ಹಣ ಮರುಪಾವತಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.