ಸೇಡಂ(ಕಲಬುರ್ಗಿ) : ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ನಮ್ಮ ನಾಯಕರು. ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಈ ಬಗ್ಗೆ ಖುದ್ದು ಡಿಜಿಯನ್ನು ಭೇಟಿ ಮಾಡಿ ಮಾಹಿತಿ ಪಡೆಯುವುದಾಗಿ ಸಂಸದ ಡಾ ಉಮೇಶ್ ಜಾಧವ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ದೊಡ್ಡ ನಾಯಕರು. ಅಂತಹವರಿಗೆ ಕೊಲೆ ಬೆದರಿಕೆ ಬಂದಿರುವುದರ ಬಗ್ಗೆ ತನಿಖೆಯಾಗಲೇಬೇಕು. ಯಾವ ಉದ್ದೇಶಕ್ಕಾಗಿ ಬೆದರಿಕೆ ಬಂದಿದೆ ಎಂಬುದೇ ಅರ್ಥವಾಗುತ್ತಿಲ್ಲ. ಕೂಡಲೇ ತಪ್ಪಿತಸ್ಥರ ಬಂಧನವಾಗಬೇಕು. ಹೀಗೆ ಬಿಟ್ಟರೆ ಮುಂದೆ ನಮ್ಗೂ ಬೆದರಿಕೆ ಬರಬಹುದು. ಈ ಬಗ್ಗೆ ಸರ್ಕಾರದ ಗಮನ ಸೆಳೆದು ನಮ್ಮ ನಾಯಕರಿಗೆ ರಕ್ಷಣೆ ನೀಡಲು ಕೋರುತ್ತೇನೆ ಎಂದರು.