ಕಲಬುರಗಿ: ರಾಮಮಂದಿರ ವೃತ್ತದಲ್ಲಿ ಮರಳಿನ ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ರಾಮಮಂದಿರ ವೃತ್ತದಲ್ಲಿ ಯಮಸ್ವರೂಪಿಯಾಗಿ ಬಂದ ಮರಳಿನ ಟಿಪ್ಪರ್ ದ್ವಿಚಕ್ರ ಸವಾರರಿಬ್ಬರ ಮೇಲೆ ಹರಿದಿದೆ. ಪರಿಣಾಮ ಸಿಂಧಗಿ ತಾಲೂಕಿನ ಆಲಮೇಲ ನಿವಾಸಿಗಳಾದ ಶಿವಲಾಲ್ (41), ನಿಂಗಪ್ಪ (31) ಸ್ಥಳದಲ್ಲೇ ಮೃತಪಟ್ಟರು. ಈ ವೇಳೆ ರಸ್ತೆಯಲ್ಲಿ ಗಾಯಾಳುಗಳ ರಕ್ತ ಹರಿದಿತ್ತು. ಘಟನೆ ನಡೆದ ಬಳಿಕ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ವೇಳೆ ರೊಚ್ಚಿಗೆದ್ದ ಜನರನ್ನು ಚದುರಿಸಿ, ಕಾರ್ಯಾಚರಣೆ ಕೈಗೊಳ್ಳುವಲ್ಲಿ ಪೊಲೀಸರು ಹೈರಾಣಾದರು.
ಇಲ್ಲಿನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.