ETV Bharat / state

2 ಲಕ್ಷ ರೆಮ್ಡಿಸಿವಿರ್​​​​ ಬಂದಿವೆ, ಆಕ್ಸಿಜನ್ ಸಮಸ್ಯೆ ಬಗೆಹರಿಯಲಿದೆ: ಸಚಿವ ನಿರಾಣಿ

author img

By

Published : May 7, 2021, 7:58 PM IST

Updated : May 7, 2021, 11:02 PM IST

ಅನೇಕ ಕಡೆಗಳಲ್ಲಿ ಬೆಡ್ ಖಾಲಿ ಇದ್ದರೂ ಸಹ ನೀಡುತ್ತಿಲ್ಲ ಮತ್ತು ಔಷಧಗಳು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿವೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿಶೇಷ ಸಾಫ್ಟವೇರ್ ತಯಾರಿಸಲಾಗಿದೆ. ಇದರಿಂದ ಮೂರ್ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ. ಈಗಾಗಲೇ ರಾಜ್ಯಕ್ಕೆ 2 ಲಕ್ಷ ರೆಮ್ಡೆಸಿವರ್ ಇಂಜೆಕ್ಷನ್ ತರಿಸಲಾಗಿದೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

two lakh remidesivir arrived to state says minister nirani
2 ಲಕ್ಷ ರೆಮಿಡಿಸಿವರ್ ಬಂದಿವೆ, ಆಕ್ಸಿಜನ್ ಸಮಸ್ಯೆ ಬಗೆಹರಿಯಲಿದೆ; ಸಚಿವ ನಿರಾಣಿ

ಸೇಡಂ: ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ, ಆದರೆ ಸಿಲಿಂಡರ್ ಮತ್ತು ಸರಬರಾಜಿನ ಸಮಸ್ಯೆ ಇದೆ. ಮೂರ್ನಾಲ್ಕು ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಭರವಸೆ ನೀಡಿದ್ದಾರೆ.

ಪಟ್ಟಣದ ನೃಪತುಂಗ ಪದವಿ ಕಾಲೇಜು ಆವರಣದಲ್ಲಿ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ, ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಹಾಗೂ ಸೇವಾ ಭಾರತಿ ಇವುಗಳ ಸಹಯೋಗದಲ್ಲಿ ಆರಂಭಿಸಲಾದ ಸಪ್ಪಣಾರ್ಯ ಶಿವಯೋಗಿ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಅವರು ಮಾತನಾಡಿದರು.

ಅನೇಕ ಕಡೆಗಳಲ್ಲಿ ಬೆಡ್ ಖಾಲಿ ಇದ್ದರೂ ನೀಡುತ್ತಿಲ್ಲ ಮತ್ತು ಔಷಧಗಳು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿವೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವಿಶೇಷ ಸಾಫ್ಟವೇರ್ ತಯಾರಿಸಲಾಗಿದೆ. ಇದರಿಂದ ಮೂರ್ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ. ಈಗಾಗಲೇ ರಾಜ್ಯಕ್ಕೆ 2 ಲಕ್ಷ ರೆಮ್ಡೆಸಿವರ್ ಇಂಜೆಕ್ಷನ್ ತರಿಸಲಾಗಿದೆ. ಅವಶ್ಯಕತೆಗನುಗುಣವಾಗಿ, ವೈದ್ಯರ ಚೀಟಿ ನೀಡಿದ ಮೇಲೆ ಔಷಧ ನೀಡಲಾಗುವುದು ಮತ್ತು ಖಾಲಿಯಾದ ಬಾಟಲಿಗಳನ್ನು ಹಿಂಪಡೆದು, ಸೋಂಕಿತ ಮಾಹಿತಿ ಪಡೆದು ಪೊಲೀಸ್ ಇಲಾಖೆಗೆ ನೀಡಲಾಗುತ್ತದೆ ಎಂದು ಹೇಳಿದರು.

2 ಲಕ್ಷ ರೆಮ್ಡಿಸಿವಿರ್​​​​ ಬಂದಿವೆ, ಆಕ್ಸಿಜನ್ ಸಮಸ್ಯೆ ಬಗೆಹರಿಯಲಿದೆ: ಸಚಿವ ನಿರಾಣಿ

ರಾಜ್ಯದಲ್ಲಿ ಎಲ್ಲೂ ಸಹ ಆಕ್ಸಿಜನ್ ಕೊರತೆ ಇಲ್ಲ. ಆದರೆ, ಸಿಲಿಂಡರ್ ಮತ್ತು ಸರಬರಾಜಿನ ಕೊರತೆ ಇದೆ. ಇದನ್ನು ನೀಗಿಸಲು ಖಾಸಗಿ ವಾಹನಗಳನ್ನು ಖರೀದಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳನ್ನು ಹೊರತುಪಡಿಸಿ, ಖಾಸಗಿಯವರಿಗೆ 20 ಟನ್ ನೀಡಲಾಗುವುದು. ಜಿಂದಾಲ್ ಕಾರ್ಖಾನೆ 600 ಟನ್ ಆಕ್ಸಿಜನ್ ಕರ್ನಾಟಕಕ್ಕೆ ನೀಡುತ್ತಿದೆ. ಸಿಲಿಂಡರ್ ಕೊರತೆ ನೀಗಿಸಲು ಮಹಾರಾಷ್ಟ್ರ ಹಾಗೂ ಇನ್ನಿತರ ಕಡೆಯಿಂದ 500 ಸಿಲಿಂಡರ್ ಹೊಂದಿಸಲಾಗಿದೆ. ಅವು ಸಂಜೆವರೆಗೆ ಪೂರೈಕೆಯಾಗಲಿವೆ ಎಂದು ಸಚಿವರು ಮಾಹಿತಿ ನೀಡಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಸೇಡಂ, ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಮಾತನಾಡಿದರು. ಶ್ರೀ ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯರು, ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ಕೋವಿಡ್ ಕೇರ್ ಸೆಂಟರ್ ಮುಖ್ಯಸ್ಥರಾದ ಶಿವಕುಮಾರ ಪಾಟೀಲ ಜಿಕೆ ವೇದಿಕೆಯಲ್ಲಿದ್ದರು.

ಸಂಸದ ಡಾ. ಉಮೇಶ ಜಾಧವ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್​, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್​ ರದ್ದೆವಾಡಗಿ, ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ, ಅಮರನಾಥ ಪಾಟೀಲ್​, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಚಾರಕ ವಿಜಯ ಮಹಾಂತೇಶಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಪುರಸಭೆ ಉಪಾಧ್ಯಕ್ಷ ಶಿವಾನಂದಸ್ವಾಮಿ, ವೆಂಕಟೇಶ ಪಾಟೀಲ, ವಿಜಯಕುಮಾರ ಆಡಕಿ, ಶಿವಕುಮಾರ ಬೋಳಶೆಟ್ಟಿ, ಸಹಾಯಕ ಆಯುಕ್ತ ರಮೇಶ ಕೋಲಾರ, ತಹಸೀಲ್ದಾರ್​ ಬಸವರಾಜ ಬೆಣ್ಣೆಶಿರೂರ ಇನ್ನಿತರರು ಉಪಸ್ಥಿತರಿದ್ದರು.

Last Updated : May 7, 2021, 11:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.