ETV Bharat / state

ಕಾಂಗ್ರೆಸ್ ಖಾಲಿ ಡಬ್ಬ, ಹಾಗಾಗಿ ಸದ್ದು ಜಾಸ್ತಿಯಂತೆ.. ಸಾರಿಗೆ ಮುಷ್ಕರ ಕಾನೂನು ಬಾಹಿರವಂತೆ.. - Transport employees' strike politically motivated: Minister Shivaram Hebbar

ಒಂಬತ್ತರಲ್ಲಿ ಎಂಟು ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಉಪಚುನಾವಣೆ ನಂತರ ವೇತನ ಹೆಚ್ಚಳ ಮಾಡುವ ಸ್ಪಷ್ಟ ಭರವಸೆ ನೀಡಲಾಗಿದೆ. ನೌಕರರು ಕೂಡಲೇ ಪ್ರತಿಭಟನೆ ಕೈ ಬಿಟ್ಟು ಸರ್ಕಾರದ ಜೊತೆ ಮಾತುಕತೆಗೆ ಮುಂದಾಗಬೇಕು..

Minister Shivaram Hebbar
ಸಚಿವ ಶಿವರಾಮ್​ ಹೆಬ್ಬಾರ್
author img

By

Published : Apr 11, 2021, 7:29 PM IST

ಕಲಬುರಗಿ : ಸಾರಿಗೆ ನೌಕರರ ಮುಷ್ಕರ ರಾಜಕೀಯ ಪ್ರೇರಿತ. ಸಾರಿಗೆ ಸಂಸ್ಥೆ ಸಿಬ್ಬಂದಿ ಮುಷ್ಕರ ಕಾನೂನು ಬಾಹಿರವಾಗಿದೆ. ಆದ್ದರಿಂದ ಮುಷ್ಕರ‌ ಕೈಬಿಡಬೇಕೆಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್​ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, 6ನೇ ವೇತನ ಆಯೋಗ ಕೊಡಲು ಯಾವುದೇ ಕಾರಣಕ್ಕೂ ಆಗುವುದಿಲ್ಲ ಎಂದು ಸಿಎಂ ಮತ್ತು ಸಾರಿಗೆ ಸಚಿವರು ಸ್ಪಷ್ಟಪಡಿಸಿದ್ದಾರೆ. ಒಂಬತ್ತರಲ್ಲಿ ಎಂಟು ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಉಪಚುನಾವಣೆ ನಂತರ ವೇತನ ಹೆಚ್ಚಳ ಮಾಡುವ ಸ್ಪಷ್ಟ ಭರವಸೆ ನೀಡಲಾಗಿದೆ. ನೌಕರರು ಕೂಡಲೇ ಪ್ರತಿಭಟನೆ ಕೈ ಬಿಟ್ಟು ಸರ್ಕಾರದ ಜೊತೆ ಮಾತುಕತೆಗೆ ಮುಂದಾಗಬೇಕು ಎಂದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಸಚಿವ ಶಿವರಾಮ್​ ಹೆಬ್ಬಾರ್, ಮಾಜಿ ಸಚಿವ ಸಿ ಟಿ ರವಿ..

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮಾತನಾಡಿ, ಕಾಂಗ್ರೆಸ್ ಪಕ್ಷ ಖಾಲಿ ಡಬ್ಬ. ಹೀಗಾಗಿ, ಬಹಳ ಸದ್ದು ಮಾಡುತ್ತೆ. ಉಪ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ಖಾಲಿ ಡಬ್ಬ ಅನ್ನೋದು ಮತ್ತೊಮ್ಮೆ ಸಾಬೀತಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಯತ್ನಾಳ್​ ಸೇರಿದಂತೆ ಕೆಲವರು ಪಕ್ಷದ ವಿರುದ್ಧ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿ ಟಿ ರವಿ, ಅಶಿಸ್ತಿನ ವಿರುದ್ಧ ಕ್ರಮಕೈಗೊಳ್ಳಲು ಕಮಿಟಿ ಇದೆ. ಏನಾದ್ರೂ ಆದಾಗ ವೈದ್ಯರು ಆಪರೇಶನ್ ಮಾಡ್ತಾರೆ. ಆದರೆ, ಆಪರೇಷನ್​ಗೂ ಮುನ್ನ ಬಿಪಿ, ಶುಗರ್ ನಾರ್ಮಲ್ ಬರೋ ಹಾಗೆ ನೋಡಕೊಳ್ಳುತ್ತಾರೆ. ಹಾಗೆ ನೇರವಾಗಿ ಪಕ್ಷದಿಂದ ಯಾರನ್ನೂ ತೆಗೆಯುವುದಿಲ್ಲ. ಶಿಸ್ತು ಸಮಿತಿ ಯತ್ನಾಳ್​ ಬಗ್ಗೆ ನಿರ್ಧಾರ ಮಾಡುತ್ತೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.