ಕಲಬುರಗಿ: ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಮತ್ತೆ ಮೂವರು ನಿಧನರಾಗಿದ್ದಾರೆ. ಇದರಿಂದ ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ175ಕ್ಕೆ ಏರಿಕೆಯಾಗಿದೆ.
ತೀವ್ರ ಉಸಿರಾಟ ತೊಂದರೆ, ಅಧಿಕ ರಕ್ತದೊತ್ತಡ ಹಾಗೂ ನ್ಯುಮೋನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಕಲಬುರಗಿಯ ರಾಮನಗರ ನಿವಾಸಿ 73 ವರ್ಷದ ವೃದ್ಧ (P-2130590) ಹಾಗೂ ಕಲಬುರಗಿ ತಾಲೂಕಿನ ಶರಣಸಿರಸಗಿಯ 65 ವರ್ಷದ ವೃದ್ಧ (P-223866) ಮತ್ತು ಕಲಬುರಗಿ ನಗರದ ಆಳಂದ ಚೆಕ್ ಪೋಸ್ಟ್ ಹತ್ತಿರದ 55 ವರ್ಷದ ವ್ಯಕ್ತಿ (P-230000) ನಿಧನರಾಗಿದ್ದಾರೆ.
ಇಂದು ಮತ್ತೆ 154 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 9,419ಕ್ಕೆ ಏರಿಕೆಯಾಗಿದೆ. 247 ಜನ ಇಂದು ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು ಗುಣಮುಖ ಆದವರ ಸಂಖ್ಯೆ 7378ಕ್ಕೆ ಏರಿಕೆಯಾಗಿದೆ. 1866 ಸಕ್ರಿಯ ಪ್ರಕರಣಗಳಿವೆ.