ಕಲಬುರಗಿ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ ದಾರುಣ ಘಟನೆ ಕಮಲಾಪೂರ ತಾಲೂಕಿನ ಮಟಕಿ ತಾಂಡಾದ ಬಳಿ ನಡೆದಿದೆ.
ಅಂಬರೇಶ್ (24), ಅನೀಲ ಗುತ್ತೇದಾರ್ (26) ಹಾಗೂ ನಾಗೇಶ್ (24) ಮೃತರು ಎಂದು ಗುರುತಿಸಲಾಗಿದೆ. ನಾಗೇಶ್ ಎನ್ನುವ ಯುವಕ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಂಬರೇಶ್ ಮತ್ತು ಅನೀಲ ಗುತ್ತೇದಾರ್, ಈ ಇಬ್ಬರು ಲಾಡಮುಗಳಿ ಗ್ರಾಮದವರಾಗಿದ್ದು, ನಾಗೇಶ್ ಕಲಬುರಗಿ ತಾಲೂಕಿನ ಬೆಲೂರು ಜೆ.ಗ್ರಾಮದ ನಿವಾಸಿಯಾಗಿದ್ದಾನೆ. ಕುಡಿದ ಮತ್ತಿನಲ್ಲಿ ವೇಗವಾಗಿ ಬೈಕ್ ಚಲಾಯಿಸಿದ್ದರಿಂದ ಪರಸ್ಪರ ಬೈಕ್ಗಳು ಡಿಕ್ಕಿ ಹೊಡೆದಿವೆ. ಪರಿಣಾಮ, ತಲೆಗೆ ಪೆಟ್ಟಾಗಿ ಮೂವರೂ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಮಂಡ್ಯದಲ್ಲಿ ಬೇಟೆಗಾರರಿಂದ ಯುವಕನಿಗೆ ಗುಂಡೇಟು: ಗ್ರಾಮಸ್ಥರ ಪ್ಲಾನ್ನಿಂದ ಸಿಕ್ಕಿಬಿದ್ದ ಖದೀಮರು