ಕಲಬುರಗಿ: ಜಿಲ್ಲೆಯಲ್ಲಿ ಸಿಆರ್‌ಪಿಸಿ ಕಲಂ 144 ಅನ್ವಯ ನಿಷೇಧಾಜ್ಞೆಯನ್ನ ಮೇ ತಿಂಗಳ ಮುಕ್ತಾಯದವರೆಗೆ ಮುಂದುವರೆಸಲು ಜಿಲ್ಲಾಧಿಕಾರಿ ಬಿ.ಶರತ್ ಚಿಂತನೆ ನಡೆಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೇ 17ರ ವರೆಗೆ ನಿಷೇಧಾಜ್ಞೆ ಜಾರಿ ಇದೆ. ನಂತರ ಆಗಿನ ಸ್ಥಿತಿಗತಿ ನೋಡಿಕೊಂಡು ಬಹುತೇಕವಾಗಿ ಮೇ ತಿಂಗಳ ಮುಕ್ತಾಯದವರೆಗೆ 144 ನಿಷೇಧಾಜ್ಞೆ ಮುಂದುವರಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.