ಕಲಬುರಗಿ : ಜಂಗಮಶೆಟ್ಟಿ ಸ್ಮರಣಾರ್ಥವಾಗಿ ಪ್ರತಿವರ್ಷ ಕೊಡಮಾಡುವ ಎಸ್.ಬಿ.ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ಸಮಾರಂಭವು ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಲಾಗಿತ್ತು.
ರಂಗ ಸಂಗಮ ಕಲಾವೇದಿಕೆ ವತಿಯಿಂದ ಪ್ರತಿವರ್ಷ ರಂಗ ಕಲಾವಿದರಿಗೆ ಕೊಡಮಾಡುವ ಪ್ರಸಿದ್ದ ಎಸ್.ಬಿ.ಜಂಗಮಶೆಟ್ಟಿ ಪ್ರಶಸ್ತಿ ಕಾರ್ಯಕ್ರಮಕ್ಕೆ ಹಿರಿಯ ರಂಗಕರ್ಮಿ ಪ್ರಕಾಶ ಬೆಳವಾಡಿ ಚಾಲನೆ ನೀಡಿದರು. ಈ ಬಾರಿಯ ಪ್ರಶಸ್ತಿಗೆ ಭಾಜನರಾದ ಪ್ರತಿಭಾವಂತ ನಿರ್ದೇಶಕ, ನಾಟಕಕಾರ, ರಂಗಕರ್ಮಿ ಶ್ರೀಪಾದ ಭಟ್ ಅವರಿಗೆ ಜಂಗಮಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಿರಿಯ ಸಾಹಿತಿ ಸ್ವಾಮಿರಾವ್ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ಕಲಾವಿದ ಎಲ್.ಬಿ.ಕೆ.ಆಲ್ದಾಳ , ರಂಗಸಂಗಮ ಕಲಾವೇದಿಕೆ ಸಂಸ್ಥಾಪಕಿ ಸುಜಾತಾ ಜಂಗಮಶೆಟ್ಟಿ, ಸಾಹಿತಿ ಮಣಿಪಾಲರೆಡ್ಡಿ ಮುನ್ನೂರು ಸೇರಿದಂತೆ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.