ಕಲಬುರಗಿ: 2001ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಮಂಜೂರಾಗಿದ್ದ ಗುಲ್ಬರ್ಗಾ ಜವಳಿ ಪಾರ್ಕನ್ನು ಕೇಂದ್ರ ಸರ್ಕಾರ ಕಿತ್ತುಕೊಂಡು ಜಿಲ್ಲೆಗೆ ಅನ್ಯಾಯ ಮಾಡಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಉದ್ದೇಶಿತ ಜವಳಿ ಪಾರ್ಕ್‌ನಲ್ಲಿ ಸುಮಾರು 5 ಸಾವಿರ ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸಬಹುದಾಗಿದೆ ಎಂದಿದ್ದಾರೆ.
ಇಲ್ಲಸಲ್ಲದ ಸಬೂಬು ನೀಡಿ ಕೇಂದ್ರ ಸರ್ಕಾರ ಜವಳಿ ಪಾರ್ಕ್ ಕಿತ್ತುಕೊಂಡು ಉದ್ಯೋಗ ಅವಕಾಶದಿಂದ ಜನರನ್ನು ವಂಚಿಸಿದ್ದಲ್ಲದೆ ಈ ಭಾಗಕ್ಕೆ ಅನ್ಯಾಯ ಎಸಗಿದೆ ಎಂದು ಅವರು ದೂರಿದ್ದಾರೆ.