ಕಲಬುರಗಿ: ಮುಂಬೈನ ಚೈತ್ಯ ಭೂಮಿಯಲ್ಲಿ ನಡೆಯಲಿರುವ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಸಮಾರಂಭದಲ್ಲಿ ಭಾಗವಹಿಸಲು ಹೋಗುವ ಅವರ ಅನುಯಾಯಿಗಳಿಗೆ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ.
01319-01320 ಸಂಖ್ಯೆಯ ರೈಲು ಡಿ 5ರಂದು ರಾತ್ರಿ 8.40ಕ್ಕೆ ಕಲಬುರಗಿ ನಗರದಿಂದ ಹೊರಟು ಸೊಲ್ಲಾಪುರ, ಕುರ್ದವಾಡಿ, ದೌಂಡ್, ಪುಣೆ, ಲೋನಾವಳಾ, ಕರ್ಜತ್, ಕಲ್ಯಾಣ್, ದಾದರ್ ಮೂಲಕ ಡಿ 6ರಂದು ಬೆಳಗ್ಗೆ 8.20ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್ ತಲುಪಲಿದೆ. ಡಿಸೆಂಬರ್ 7ರಂದು ರಾತ್ರಿ 12.25ಕ್ಕೆ ಮುಂಬೈನಿಂದ ಹೊರಡುವ ರೈಲು ಅದೇ ದಿನ ಮಧ್ಯಾಹ್ನ1.40ಕ್ಕೆ ಕಲಬುರಗಿಗೆ ಬರಲಿದೆ.