ETV Bharat / state

ಪೊಲೀಸ್ ಕಾನ್​ಸ್ಟೇಬಲ್ ನೇರ ನೇಮಕ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಈ ಹಿಂದೆ ನಿಗದಿಪಡಿಸಲಾಗಿದ್ದ 2020 - 21ನೇ ಸಾಲಿನ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಪೊಲೀಸ್ ಕಾನ್​ಸ್ಟೇಬಲ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಯ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್​​. ಸತೀಶ್​ ಕುಮಾರ್ ತಿಳಿಸಿದ್ದಾರೆ.

Kalburgi
ನಗರ ಪೊಲೀಸ್ ಆಯುಕ್ತ ಎನ್​​. ಸತೀಶ್​ ಕುಮಾರ್​
author img

By

Published : Jun 17, 2020, 10:30 AM IST

ಕಲಬುರಗಿ: 2020-21ನೇ ಸಾಲಿನ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಪೊಲೀಸ್ ಕಾನ್​ಸ್ಟೇಬಲ್​ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಈಗಾಗಲೇ ಅರ್ಜಿ ಆಹ್ವಾನಿಸಲಾಗಿತ್ತು. ಪ್ರಸ್ತುತ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಈ ಹಿಂದೆ ನಿಗದಿಪಡಿಸಲಾಗಿದ್ದ ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿ ಕೊನೆ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್​​. ಸತೀಶ್​ ಕುಮಾರ್​ ತಿಳಿಸಿದ್ದಾರೆ.

ಸಿ.ಪಿ.ಸಿ. (ಪುರುಷ ಮತ್ತು ಮಹಿಳಾ) (ಕಲ್ಯಾಣ ಕರ್ನಾಟಕ) 558 ಹುದ್ದೆಗಳಿಗೆ ಹಾಗೂ ಎಪಿಸಿ (ಪುರುಷ) (ಸಿಎಆರ್/ಡಿಎಆರ್) (ಕಲ್ಯಾಣ ಕರ್ನಾಟಕ) 444 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನು ಜೂನ್ 22 ರ ಬದಲಾಗಿ ಜುಲೈ 9 ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ, ಶುಲ್ಕ ಪಾವತಿಗೆ ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನು ಜುಲೈ 15ರ ವರೆಗೆ ವಿಸ್ತರಣೆ ಮಾಡಲಾಗಿದೆ.

ಸಿ.ಪಿ.ಸಿ. (ಪುರುಷ ಮತ್ತು ಮಹಿಳೆ) 2007 ಹುದ್ದೆಗಳಿಗೆ ಮತ್ತು ಎ.ಪಿ.ಸಿ. (ಪುರುಷ) (ಸಿಎಆರ್/ಡಿಎಆರ್) 1005 ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನು ಜೂನ್ 22 ರ ಬದಲಾಗಿ ಜುಲೈ 13 ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ ಶುಲ್ಕ ಪಾವತಿಗೆ ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನು ಜೂನ್ 25 ರ ಬದಲಾಗಿ ಜುಲೈ 15 ರವರೆಗೆ ವಿಸ್ತರಿಸಲಾಗಿದೆ.

ಅಸಿಸ್ಟೆಂಟ್​​ ಸ್ಪೆಷಲ್​ ಕೆ.ಆರ್.ಪಿ.ಸಿ. (ಪುರುಷ ಮತ್ತು ಮಹಿಳಾ) (ಕೆ.ಎಸ್.ಆರ್.ಸಿ ಮತ್ತು ಐ.ಆರ್.ಬಿ.) 2420 ಹುದ್ದೆಗಳಿಗೆ ಹಾಗೂ ಸ್ಪೆಷಲ್​ ಕೆ.ಆರ್.ಪಿ.ಸಿ. (ಪುರುಷ) ಬ್ಯಾಂಡ್ಸ್‍ಮನ್ (ಕೆ.ಎಸ್.ಆರ್.ಪಿ. ಮತ್ತು ಐ.ಆರ್.ಬಿ.) 252 ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನು ಜೂನ್ 15 ರ ಬದಲಾಗಿ ಜುಲೈ 6 ರವರೆಗೆ ವಿಸ್ತರಿಸಲಾಗಿದೆ.

ಅದೇ ರೀತಿ ಶುಲ್ಕ ಪಾವತಿಗೆ ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನು ಜೂನ್ 18 ರ ಬದಲಾಗಿ ಜುಲೈ 8 ರವರೆಗೆ ವಿಸ್ತರಿಸಲಾಗಿದೆ. ಮೇಲ್ಕಂಡ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇನ್ನುಳಿದ ಅರ್ಹತಾ ಷರತ್ತು ಹಾಗೂ ವಯೋಮಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.