ಕಲಬುರಗಿ: ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ದೇವಸ್ಥಾನಗಳು ಬಂದ್ ಆಗಿವೆ. ಕಲಬುರಗಿ ಜನರ ಆರಾಧ್ಯ ದೈವ ಶರಣಬಸವೇಶ್ವರ ದೇವಸ್ಥಾನ ಸಹ ಬಂದ್ ಆಗಿದೆ.
ಬೆಳಗ್ಗೆ 7 ರಿಂದ 10 ಗಂಟೆವರೆಗೂ ನಿತ್ಯ ದೇವರ ದರ್ಶನದ ವ್ಯವಸ್ಥೆ ಇತ್ತು. ಆದರೆ ಇಂದು ಸೂರ್ಯಗ್ರಹಣದ ಹಿನ್ನೆಲೆ ಬೆಳಗ್ಗೆಯೇ ದೇವಸ್ಥಾನದ ಬಾಗಿಲು ಬಂದ್ ಮಾಡಲಾಗಿದೆ. ಅಫ್ಜಲ್ಪುರ ತಾಲೂಕಿನ ದತ್ತಾತ್ರೇಯ ಮಂದಿರದಲ್ಲಿಯೂ ಭಕ್ತರಿಗೆ ದರ್ಶನವಿಲ್ಲ. ಜೂನ್ 22ರವರೆಗೂ ದತ್ತ ದರ್ಶನವಿಲ್ಲ. ಆದರೆ ಸೂರ್ಯಗ್ರಹಣ ಆರಂಭ ಮತ್ತು ಮೋಕ್ಷದ ವೇಳೆ ಅರ್ಚಕರಿಂದ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ನಂತರ ಮದಕರಿ ವ್ಯವಸ್ಥೆ, ನೈವೇದ್ಯ ಸಮರ್ಪಣೆ ಮಾಡಲಾಗುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಶೇಕಡಾ 35 ರಷ್ಟು ಸೂರ್ಯ ಗ್ರಹಣ ಗೋಚರವಾಗಲಿದೆ.
ಬೆಳಗ್ಗೆ 10:10 ಕ್ಕೆ ಗ್ರಹಣ ಸ್ಪರ್ಶ ಹಾಗೂ ಮಧ್ಯಾಹ್ನ 1:38 ಕ್ಕೆ ಗ್ರಹಣ ಮೋಕ್ಷವಾಗುವ ಖಂಡಗ್ರಾಸ ಸೂರ್ಯಗ್ರಹಣ ಮುಗಿದ ನಂತರ ದೇವಾಲಯ ಸ್ವಚ್ಛಗೊಳಿಸಿ ನಂತರ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.