ಕಲಬುರಗಿ: ಸೂರ್ಯ ನಗರಿ ಎಂದೇ ಖ್ಯಾತಿ ಪಡೆದಿರುವ ಬಿಸಿಲೂರು ಕಲಬುರಗಿಯಲ್ಲಿ ಬೇಸಿಗೆ ಆರಂಭದಲ್ಲೇ ರವಿ ತನ್ನ ಪ್ರತಾಪ ತೋರಿಸುತ್ತಿದ್ದಾನೆ. ನೆತ್ತಿ ಸುಡುತ್ತಿರುವ ಬಿರು ಬಿಸಿಲಿದೆ ಬಸವಳಿಯುತ್ತಿರುವ ಜನ ಮಡಿಕೆ, ತಂಪು ಪಾನಿಯಗಳ ಮೊರೆ ಹೋಗುತ್ತಿದ್ದಾರೆ.
ಬಗೆಬಗೆಯ ಮಡಿಕೆಗಳು ನಗರದ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಜನರನ್ನು ಆಕರ್ಷಿಸುತ್ತಿವೆ. ಬೇಸಿಗೆ ಆರಂಭದಲ್ಲೇ ಬಿಸಿಲು ನೆತ್ತಿ ಸುಡುತ್ತಿದೆ. 37, 38, 39 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಬೆಳಗ್ಗೆ 8 ಗಂಟೆಗೆ ಆರಂಭವಾದ ಬಿಸಿಲು ಸಂಜೆ 6 ಗಂಟೆಯಾದ್ರೂ ಕಡಿಮೆ ಆಗುತ್ತಿಲ್ಲ.
ಬಿಸಿಲು ನೆತ್ತಿ ಸುಡುತ್ತಿದ್ರೆ, ತಂಪು ಪಾನಿಯ, ಮಣ್ಣಿನ ಮಡಿಕೆಗಳ ಬೆಲೆ ಏರಿಕೆ ಜನರ ಜೇಬು ಸುಡುತ್ತಿದೆ. ಬಡವರ ಫ್ರಿಡ್ಜ್ ಅಂತಾನೆ ಕರೆಯುವ ಸ್ಥಳೀಯ ಮಣ್ಣಿನ ಮಡಿಕೆಗಳ ಜೊತೆಗೆ ಮಹಾರಾಷ್ಟ್ರದ ಸೊಲ್ಲಾಪುರ, ರಾಜಾಸ್ಥಾನದ ಮಡಿಕೆಗಳು ಜನರನ್ನು ಆಕರ್ಷಿಸುತ್ತಿವೆ. ಮಣ್ಣಿನ ಮಡಿಕೆಗಳ ಬೆಲೆ ಹೆಚ್ಚಿದ್ದರು ಸಹ ಜನ ಅನಿವಾರ್ಯವಾಗಿ ಖರೀದಿ ಮಾಡುತ್ತಿದ್ದಾರೆ. ಮಡಕೆ ವ್ಯಾಪಾರ ಜೋರಾಗಿದ್ದು ವ್ಯಾಪಾರಿಗಳು ಫುಲ್ ಖುಷ್ ಆಗಿದ್ದಾರೆ.