ETV Bharat / state

ಹಸು ಕಾಣೆಯಾಗಿದ್ದಕ್ಕೆ ಮನೆಯವರು ಹೊಡೆಯುತ್ತಾರೆಂದು ಹೆದರಿ ಬಾಲಕ ಆತ್ಮಹತ್ಯೆ - Konchavaram Police Station

ದನ ಮೇಯಿಸಲು ಹೋದ ಬಾಲಕನೊಬ್ಬ ಕಾಡಿನಲ್ಲಿ ದನಗಳನ್ನು ಬಿಟ್ಟು ಸ್ನೇಹಿತರೊಂದಿಗೆ ಪಕ್ಕದ ಊರಿನ ಜಾತ್ರೆಗೆ ತೆರಳಿದ್ದರಿಂದ ಹಸು ಕಾಣೆಯಾಗಿದೆ. ಈ ಹಿನ್ನೆಲೆ ಮನೆಯವರ ಭಯಕ್ಕೆ ನೇಣಿಗೆ ಶರಣಾಗಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

dsd
ಬಾಲಕ ಆತ್ಮಹತ್ಯೆ
author img

By

Published : Jan 27, 2021, 9:58 PM IST

ಕಲಬುರಗಿ: ಕಾಡಿನಲ್ಲಿ ದನಗಳನ್ನು ಬಿಟ್ಟು ಸ್ನೇಹಿತರೊಂದಿಗೆ ಪಕ್ಕದ ಊರಿನ ಜಾತ್ರೆಗೆ ತೆರಳಿದ ಬಾಲಕನೋರ್ವ ಮರಳಿ ಮನೆಗೆ ಹೋದರೆ ಮನೆಯಲ್ಲಿ ಹೊಡೆಯಬಹುದೆಂದು ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂಚೋಳಿ ತಾಲೂಕಿನ ಕುಂಚಾವರಂ‌ ಬಳಿಯ ಲಕ್ಷ್ಮಾಸಾಗರ ಗ್ರಾಮದಲ್ಲಿ ನಡೆದಿದೆ.

ಮಧುಕರ ಲಕ್ಷ್ಮಪ್ಪ (12) ಆತ್ಮಹತ್ಯೆಗೆ ಶರಣಾದ ಬಾಲಕ. ದನ ಮೇಯಿಸಲೆಂದು ಕಾಡಿಗೆ ಹೋಗಿದ್ದ ಈತ ದನಗಳನ್ನು ಅಡವಿಯಲ್ಲೇ ಬಿಟ್ಟು ಹೋದಾಗ ಹಸುವೊಂದು ಮನೆಗೆ ಬಾರದೆ ನಾಪತ್ತೆಯಾಗಿದೆ‌.

ಈ ವಿಷಯ ತಿಳಿದ ಬಾಲಕ, ಹಸು ಇಲ್ಲದೆ ಮನೆಗೆ ಹೋದರೆ ಮನೆಯಲ್ಲಿ ಹೊಡೆಯುತ್ತಾರೆಂದು ಹೆದರಿ ಹೊಲದಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ. ಈ ಕುರಿತು ಕೊಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.