ಕಲಬುರಗಿ: ಜಿಲ್ಲೆಯ ಪೊಲೀಸರು ವರ್ಷಪೂರ್ತಿ ಭರ್ಜರಿ ಕಾರ್ಯಾಚರಣೆ ಮೂಲಕ ಠಾಣೆಯಲ್ಲಿ ದಾಖಲಾಗಿದ್ದ 488 ಪ್ರಕರಣಗಳಲ್ಲಿ 194 ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
2018-19ನೇ ಸಾಲಿನಲ್ಲಿ ಕಲಬುರಗಿ ನಗರ ಮತ್ತು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಳುವಾಗಿದ್ದ ಬಂಗಾರದ ಆಭರಣಗಳು ಹಾಗೂ ವಾಹನಗಳನ್ನು ಮಾಲೀಕರಿಗೆ ವಾಪಸ್ ನೀಡಲಾಯಿತು. ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹಾಗೂ ಡಿಸಿಪಿ ಅವರು ಬಂಗಾರದ ಆಭರಣಗಳನ್ನು ಹಾಗೂ ವಾಹನಗಳನ್ನು ವಾರಸುದಾರರಿಗೆ ನೀಡಿದರು. ಕಳೆದುಕೊಂಡ ವಸ್ತು ಮತ್ತೆ ಸಿಕ್ಕಿದ್ದಕ್ಕೆ ಜನರು ಸಂತಸ ಪಟ್ಟರು.
ಇನ್ನು 2018-19ನೇ ಸಾಲಿನಲ್ಲಿ ಒಟ್ಟು 488 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 194 ಪ್ರಕರಣಗಳು ಪತ್ತೆಯಾಗಿವೆ. ಬಂಗಾರ ಇತರೆ ವಸ್ತುಗಳು ಸೇರಿ ಒಟ್ಟು 4.5 ಕೋಟಿ ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದವು. ಅದರಲ್ಲಿ 2 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, 1.5 ಕೋಟಿ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಇದು ಜನರಲ್ಲಿ ಪೊಲೀಸರ ಮೇಲಿನ ವಿಶ್ವಾಸ ಹೆಚ್ಚಿಸಿದೆ.