ETV Bharat / state

ಚಿತ್ತಾಪುರ ಕ್ಷೇತ್ರ: ನಾಮಪತ್ರ ಸಲ್ಲಿಸಿದ ಪ್ರಿಯಾಂಕ್ ಖರ್ಗೆ, ಮಣಿಕಂಠ ರಾಠೋಡ್ ಜೊತೆಗೆ ಪತ್ನಿಯಿಂದಲೂ ನಾಮಪತ್ರ ಸಲ್ಲಿಕೆ - BJP candidate Manikant Rathod

ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಮತ್ತು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಮತ್ತು ರಾಠೋಡ್ ಪತ್ನಿಯು ನಾಮಪತ್ರ ಸಲ್ಲಿಸಿದ್ದು. ಅವರ ಆಸ್ತಿ ವಿವರ ಹೀಗಿದೆ ನೋಡಿ.

bjp cng
ಮಣಿಕಂಠ ರಾಠೋಡ್ ಮತ್ತು ಪ್ರಿಯಾಂಕ್ ಖರ್ಗೆ
author img

By

Published : Apr 21, 2023, 11:37 AM IST

Updated : Apr 21, 2023, 12:42 PM IST

ಕಲಬುರಗಿ: ಹೈವೋಲ್ಟೇಜ್​​ ಕ್ಷೇತ್ರ ಚಿತ್ತಾಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಬಿಗ್ ಫೈಟ್ ಏರ್ಪಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಮತ್ತು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ನಾಮಪತ್ರ ಸಲ್ಲಿಸಿ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ. ನಾಮಪತ್ರ ಸಲ್ಲಿಕೆಯಲ್ಲಿ ವೈಯಕ್ತಿಕ ಮತ್ತು ಆಸ್ತಿ ವಿವರ ಘೋಷಣೆ ಮಾಡಿಕೊಂಡಿರುವ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಮೇಲೆ ಬರೋಬ್ಬರಿ 40 ಕೇಸ್​ಗಳಿವೆ.

2023ರ ವಿಧಾನಸಭೆ ಚುನಾವಣೆ ಕಾವು ನಾಮಪತ್ರ ಸಲ್ಲಿಕೆ ನಂತರ ಮತ್ತಷ್ಟು ಹೆಚ್ಚಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಹೈವೋಲ್ಟೇಜ್​ ಕ್ಷೇತ್ರವಾಗಿ ಮಾರ್ಪಟ್ಟಿದೆ. ನಾಮಪತ್ರ ಸಲ್ಲಿಸಿ ಚುನಾವಣಾ ಅಖಾಡಕ್ಕೆ ಎಂಟ್ರಿಕೊಟ್ಟಿರುವ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರ ಮತ್ತ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಕೆ ಮಾಡಿದ್ದಾರೆ. ಅವರು ಚರಾಸ್ತಿ, ಸ್ಥಿರಾಸ್ತಿ ಸೇರಿ 29.17 ಕೋಟಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಮಣಿಕಂಠ ರಾಠೋಡ್ ಮೇಲೆ ಬರೋಬ್ಬರಿ 40 ಕೇಸ್​ಗಳಿವೆ ಎಂದು ಅಫಿಡವಿಟ್​ನಲ್ಲಿ ಹೇಳಲಾಗಿದೆ. 40 ಅಪರಾಧ ಪ್ರಕರಣಗಳಲ್ಲಿ 3 ಕೇಸ್​ಗಳು ನಿರ್ಣಯಗೊಂಡಿದ್ದು, ಇನ್ನುಳಿದ ಪ್ರಕರಣಗಳು ಕೋರ್ಟ್​ನಲ್ಲಿ ವಿಚಾರಣೆ ಹಂತ ಹಾಗೂ ತಡೆಯಾಜ್ಞೆಯಲ್ಲಿವೆ.

ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ, ಬೆಂಗಳೂರು ಸೇರಿದಂತೆ ಪಕ್ಕದ ತೆಲಂಗಾಣ, ಮಹಾರಾಷ್ಟ್ರದ ವಿವಿಧ ಠಾಣೆಗಳಲ್ಲಿ ಕೇಸ್​ಗಳು ದಾಖಲಾಗಿವೆ. 40 ಪ್ರಕರಣಗಳಲ್ಲಿ 23 ಕೇಸ್​ಗಳು ಪಡಿತರ ಅಕ್ಕಿ ಅಕ್ರಮವಾಗಿ ಸಾಗಾಟ ಆರೋಪಕ್ಕೆ ಸಂಬಂಧಿಸಿವೆ. ಉಳಿದಂತೆ ನಿಂದನೆ, ಜೀವ ಬೇದರಿಕೆ, ಪ್ರಚೋದನೆ, ಶಾಂತಿ ಭಂಗ ಮಾಡುವ ಮುಂಜಾಗ್ರತೆ, ಮಾರಣಾಂತಿಕ ಹಲ್ಲೆ, ಸಾರ್ವಜನಿಕರಿಗೆ ಆಗುವ ರೀತಿಯಲ್ಲಿ ಪ್ರತಿಭಟನೆ, ಅಕ್ರಮವಾಗಿ ಡೀಸೆಲ್ ಸಂಗ್ರಹ, ವಂಚನೆ, ಮೋಸ ಕುರಿತಾದ ಪ್ರಕರಣಗಳು ದಾಖಲಾಗಿವೆ.

ಆರೋಪ ಸಾಬೀತಾಗಿ ಶಿಕ್ಷೆಗೆ ಗುರಿಯಾಗಿದ್ದ ಮಣಿಕಂಠ ರಾಠೋಡ್: ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿರುದ್ಧ ದಾಖಲಾಗಿರುವ ಕೆಲ ಕೇಸ್​ಗಳು ಸಾಬೀತಾಗಿವೆ. ಮಕ್ಕಳಿಗೆ ನೀಡುವ ಉಚಿತ ಹಾಲಿನ ಪೌಡರ್​ ಕಳ್ಳ ಸಂತೆಯಲ್ಲಿ ಮಾರಾಟ ಮಾಡಿರುವುದು ಸಾಬೀತಾಗಿ ಯಾದಗಿರಿ ಸಿಜೆಎಂ ನ್ಯಾಯಾಲಯ ಒಂದು ವರ್ಷ ಜೈಲು ಮತ್ತು 10 ಸಾವಿರ ದಂಡ ವಿಧಿಸಿತ್ತು.

ಸಿಜೆಎಂ ಕೋರ್ಟ್ ಆದೇಶ ವಿರುದ್ಧ ಯಾದಗಿರಿ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಅಪೀಲ್ ಸಲ್ಲಿಸಿದ್ದಾರೆ. ಇನ್ನು ನಿರ್ಲಕ್ಷ್ಯ, ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಮಾನವ ಜೀವಕ್ಕೆ ಅಪಾಯ ತಂದೊಡ್ಡಿದ ತಪ್ಪು ಕೂಡ ಸಾಬೀತಾಗಿರುವ ಹಿನ್ನೆಲೆ ಯಾದಗಿರಿ ಕಿರಿಯ ಜೆಎಂಎಫ್ ಸಿ ಕೋರ್ಟ್ 2,004 ರೂಪಾಯಿ ದಂಡ ಕೂಡ ವಿಧಿಸಿತ್ತು. ಅಲ್ಲದೇ, ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆ ರಾಯಚೂರಿನ ಮಾನ್ವಿ ಜೆಎಂಎಫ್​ಸಿ ಕೋರ್ಟ್ 2,000 ಸಾವಿರ ರೂ ದಂಡ ವಿಧಿಸಿತ್ತು. ಎಸ್ ಎಸ್ ಎಲ್ ಸಿ ಫೇಲ್ ವಿದ್ಯಾರ್ಹತೆ ಹೊಂದಿರುವ ಮಣಿಕಂಠ ರಾಠೋಡ್ ರೌಡಿಶೀಟರ್ ಆಗಿದ್ದಾರೆ.

ಮಣಿಕಂಠ ಪತ್ನಿಯಿಂದಲೂ ನಾಮಪತ್ರ: ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ಮಣಿಕಂಠ ರಾಠೋಡ್, ಸಾಲು ಸಾಲು ಅಪರಾಧ ಕೇಸ್​ಗಳ ಹಿನ್ನೆಲೆ ಅಥವಾ ಕಾನೂನು ತೊಡಕಿನಿಂದ ನಾಮಪತ್ರ ತಿರಸ್ಕೃತ ಆಗುವ ಸಂಶಯದಿಂದ ತಮ್ಮ ಪತ್ನಿ ಭಾರತಿ ರಾಠೋಡ್ ಅವರಿಂದಲೂ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದಲೇ ನಾಮಪತ್ರ ಸಲ್ಲಿಸಿರುವ ಭಾರತಿ ರಾಠೋಡ್​ ಕೂಡ ಚರಾಸ್ತಿ, ಸ್ಥಿರಾಸ್ತಿ ಸೇರಿ 16.70 ಕೋಟಿ ಆಸ್ತಿಯನ್ನು ಅಫಿಡವಿಟ್​ನಲ್ಲಿ ಘೋಷಿಸಿಕೊಂಡಿದ್ದಾರೆ.

ಪ್ರಿಯಾಂಕ್ ಖರ್ಗೆ ವಿರುದ್ಧವೂ ಪ್ರಕರಣಗಳು: ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್​ ಖರ್ಗೆ ಕೂಡ ಕೋಟಿ ಕೋಟಿ ಆಸ್ತಿ ಒಡೆಯರಾಗಿದ್ದು, ಚರಾಸ್ತಿ, ಸ್ಥಿರಾಸ್ತಿ ಸೇರಿ ಒಟ್ಟು 14.49 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ವಿರುದ್ಧವೂ 9 ಅಪರಾಧ ಪ್ರಕರಣಗಳಿವೆ. ಬೆಂಗಳೂರಿನಲ್ಲಿ 4 ಮತ್ತು ರಾಮನಗರದಲ್ಲಿ 5 ಕೇಸ್​ಗಳು ದಾಖಲಾಗಿವೆ.

ಮಾನನಷ್ಟ ಮೊಕದ್ದಮೆ, ಸಿಎಂ ಮನೆ ಮುಂದೆ ಸೇರಿ ಇತರಡೆ ಪ್ರತಿಭಟನೆಯ ಕೇಸ್​ಗಳಿವೆ. ಅಲ್ಲದೇ ಕೊರೊನಾ ಸಂದರ್ಭದಲ್ಲಿ ಪಾದಯಾತ್ರೆ ಮಾಡಿ ಕೋವಿಡ್ ರೂಲ್ಸ್ ಉಲ್ಲಂಘನೆ ಸೇರಿ ಕಾಂಗ್ರೆಸ್ ಅಭ್ಯರ್ಥಿ ಪ್ರೀಯಾಂಕ ಖರ್ಗೆ ಮೇಲೆ 9 ಕೇಸ್ ಗಳು ದಾಖಲಾಗಿವೆ. ಕೆಲವು ಕೇಸ್​ಗಳು ವಿಚಾರಣೆ ಹಂತದಲ್ಲಿದ್ದರೆ, ಕೆಲವೊಂದು ಪ್ರಕರಣಗಳಿಗೆ ಸ್ಟೇ ದೊರೆತಿದೆ. ಇನ್ನು ಪ್ರಿಯಾಂಕ್​ ಖರ್ಗೆ ಪತ್ನಿ ಶೃತಿ ಖರ್ಗೆ ಕೂಡ ಕೋಟಿ ಆಸ್ತಿ ಒಡತಿ ಆಗಿದ್ದಾರೆ. ಚರಾಸ್ತಿ, ಸ್ಥಿರಾಸ್ತಿ ಸೇರಿ 1.06 ಕೋಟಿ ಆಸ್ತಿ ಹೊಂದಿದ್ದಾರೆ.

ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಆಸ್ತಿ ವಿವರ: ಮಣಿಕಂಠ ರಾಠೋಡ ಒಟ್ಟು ಆಸ್ತಿ : 29 ಕೋಟಿ 17 ಲಕ್ಷ. ಚರಾಸ್ತಿ :11.34 ಕೋಟಿ, ಸ್ಥಿರಾಸ್ತಿ: 17.83 ಕೋಟಿ ಇದೆ. ಚರಾಸ್ತಿ ಸ್ಥಿರಾಸ್ತಿ ವಿವರ ನೋಡುವದಾದ್ರೆ, ಎಂ.ಆರ್. ಮಾರ್ಟ್ ಇಂಪ್ಲೆಕ್ಸ್ ಪ್ರೈವೇಟ್ ಲಿಮಿಟೆಡ್, ಶ್ರೀ ಲಕ್ಷ್ಮಿ ತಿಮ್ಮಪ್ಪ ಟ್ರೇಡಿಂಗ್ ಕಂಪನಿ, ಭಾರತಿ ರಾಥೋಡ್ ಫರ್ಮ್, ಲಕ್ಷ್ಮಿ ತಿಮ್ಮಪ್ಪ ಎಜುಕೇಶನ್ ಟ್ರಸ್ಟ್,ಎಲ್ಐಸಿ, ಎಚ್ ಡಿ ಎಫ್ ಸಿ ಲೈಫ್ ಪಾಲಿಸಿ ಇತ್ಯಾದಿ ಕಡೆಗಳಲ್ಲಿ ಹೂಡಿಕೆ ಇದೆ. ಕೈಯಲ್ಲಿ 6.75 ಲಕ್ಷ ನಗದು ಹೊಂದಿದ್ದಾರೆ.

15 ಕೋಟಿ ಸಾಲ ಇದೆ. 408 ತೊಲ ಚಿನ್ನ, ಅರ್ಧ ಕೆಜಿ ಬೆಳ್ಳಿ, ರೇಂಜ್ ರೋವರ್, ಫಾರ್ಚುನರ್, ವೋಲ್ವೋ ಎಕ್ಸ್ ಸಿ, ಬೆಂಜ್ ನಂತಹ ಐಷಾರಾಮಿ ಕಾರುಗಳು, ಟ್ರಕ್, ಟ್ರ್ಯಾಕ್ಟರ್ ಸೇರಿದಂತೆ ಒಟ್ಟು 12 ವಾಹನಗಳು ಇವೆ. ಗುರುಮಿಠಕಲ್, ಮಾಲಗತ್ತಿ, ಭಾಗೋಡಿ ಗ್ರಾಮದಲ್ಲಿ 19 ಎಕ್ಕರೆ ಕೃಷಿ ಭೂಮಿ ಇದೆ. ಮಹಾರಾಷ್ಟ್ರದ ಕಲ್ಯಾಣದಲ್ಲಿ ವಾಣಿಜ್ಯ ಕಟ್ಟಡ, ಹೈದರಾಬಾದ್, ಕಲಬುರಗಿ, ಗುರುಮಿಠಲ್​ನಲ್ಲಿ ವಸತಿ ಕಟ್ಟಡ ಹೊಂದಿದ್ದಾರೆ.

ಪತ್ನಿ ಭಾರತಿ ರಾಠೋಡ್​ ಹೆಸರಿನ ಆಸ್ತಿ: ಒಟ್ಟು ಆಸ್ತಿ : 16.70 ಕೋಟಿ, ಚರಾಸ್ತಿ :3.22 ಕೋಟಿ, ಸ್ಥೀರಾಸ್ತಿ :13.48 ಕೋಟಿ ಇದೆ. ಕೈಯಲ್ಲಿ ನಗದು 1.90 ಲಕ್ಷ, ಶ್ರೀ ಲಕ್ಷ್ಮಿ ತಿಮ್ಮಪ್ಪ ಟ್ರೇಡಿಂಗ್ ಕಂಪನಿಯಲ್ಲಿ 70.51 ಲಕ್ಷ ಹೂಡಿಕೆ, 1.04 ಕೋಟಿಯ ಒಂದು ಬೆಂಜ್ ಕಾರು, 22 ಲಕ್ಷ ಮೌಲ್ಯದ ಒಂದು ಇನೋವಾ ಕಾರು ಇದೆ. 250 ತೊಲೆ ಚಿನ್ನಾಭರಣ, 1/2 ಕೆಜಿ ಬೆಳ್ಳಿ, ಗುರುಮಿಠಕಲ್ ಎಪಿಎಂಸಿ ಯಾರ್ಡ್​ನಲ್ಲಿ ವಾಣಿಜ್ಯ ನಿವೇಶನ, ಮಹಾರಾಷ್ಟ್ರದ ಕಲ್ಯಾಣದಲ್ಲಿ ಫ್ಲಾಟ್, ತೆಲಂಗಾಣದ ಹೈದರಾಬಾದ್​ನಲ್ಲಿ ಫ್ಲಾಟ್ ಹೊಂದಿದ್ದಾರೆ. ಲಕ್ಷ್ಮಿತಿಮ್ಮಪ್ಪ , ನಾರಾಯಣಿ ಹಾಗೂ ಓಂಕಾರೇಶ್ವರ ಮೂರು ಮಕ್ಕಳಿದ್ದು, ಲಕ್ಷ್ಮಿತಿಮ್ಮಪ್ಪ ಹಾಗೂ ನಾರಾಯಣಿ ಹೆಸರಿನಲ್ಲಿ ಕ್ರಮವಾಗಿ 25 ಲಕ್ಷ ಮತ್ತು 50 ಲಕ್ಷ ಆಸ್ತಿ ಇದೆ.

ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಆಸ್ತಿ ವಿವರ: ಒಟ್ಟು ಆಸ್ತಿ: 14.49 ಕೋಟಿ, ಇದರಲ್ಲಿ ಚರಾಸ್ತಿ: 4.20 ಕೋಟಿ, ಸ್ಥಿರಾಸ್ತಿ: 10.29 ಕೋಟಿ, ಸಾಲ - 28.75 ಲಕ್ಷ. ಆಸ್ತಿಯ ವಿವರ ನೋಡುವದಾದ್ರೆ, ಕೈಯಲ್ಲಿ ನಗದು ಹಣ 2.0 ಲಕ್ಷ, 650 ತೊಲೆ ಚಿನ್ನ, 2 ಕೆ.ಜಿ ಬೆಳ್ಳಿ, 29.52 ಲಕ್ಷದ ಹೋಂಡಾ ಸಿ ಆರ್ ವಿ ಕಾರು, 68.25 ಲಕ್ಷ ಮೌಲ್ಯದ ಷೇರುಗಳು, ವಿವಿಧ ಪ್ರೈವೇಟ್ ಲಿಮಿಟೆಡ್ ಕಂಪನಿಗಳಲ್ಲಿ ಬಾಂಡ್ಸ್, 3.43 ಲಕ್ಷ ಮೌಲ್ಯದ ಯುಟಿಐ ಡಿವಿಡೆಂಡ್ ಇಲ್ಡ್ ಫಂಡ್, ಬೆಂಗಳೂರಿನಲ್ಲಿ ಕಮರ್ಷಿಯಲ್ ಬಿಲ್ಡಿಂಗ್, ಬೆಂಗಳೂರಿನಲ್ಲಿ ವಸತಿ ಮನೆ, ಗುಂಡಗುರ್ತಿಯಲ್ಲಿ 46.28 ಎಕರೆ ಕೃಷಿ ಜಮೀನು, ಬೆಂಗಳೂರಿನಲ್ಲಿ 2700 ಸ್ಕ್ವಯರ್ ಫೀಟ್ ಕೃಷಿಯೇತರ ಭೂಮಿ, ಕಲ್ಬುರ್ಗಿಯ ಬಡೆಪುರ್ ಕಾಲೋನಿಯಲ್ಲಿ ನಾಲ್ಕು ಸಾವಿರ ಸ್ಕ್ವಯರ್ ಫೀಟ್ ಕೃಷಿಯೇತರ ಭೂಮಿ ಹೊಂದಿದ್ದಾರೆ.

ಪತ್ನಿ ಶೃತಿ ಪಿ.ಖರ್ಗೆ ಹೆಸರಿನ ಆಸ್ತಿ: ಒಟ್ಟು ಆಸ್ತಿ: 1.06 ಕೋಟಿ, ಇದರಲ್ಲಿ ಚರಾಸ್ತಿ: 72.38 ಲಕ್ಷ , ಸ್ಥಿರಾಸ್ತಿ: 33.75 ಲಕ್ಷ ಇದೆ. ಇವರಿಗೆ ಸಾಲ ಇಲ್ಲ. ಕೈಯಲ್ಲಿ 1.50 ಲಕ್ಷ ನಗದು ಹಣ, 15 ಲಕ್ಷ ಮೌಲ್ಯದ ಶೇರ್‌ಗಳು, 900 ತೊಲೆ ಚಿನ್ನ, 5 ಕೆ.ಜಿ ಬೆಳ್ಳಿ, ತಾಯಿಯಿಂದ ಬಳಿವಳಿಯಾಗಿ ಬೆಂಗಳೂರಿನಲ್ಲಿ 1350 sq.ft ನಿವೇಶನ ಇದೆ. ಇಬ್ಬರು ಅಪ್ರಾಪ್ತ ಪುತ್ರರಿದ್ದಾರೆ. ಅಮೀತಾಬ ಪಿ. ಖರ್ಗೆ 25.39 ಲಕ್ಷ ಹಾಗೂ ಆಕಾಂಕ್ಷ ಪಿ. ಖರ್ಗೆ 4.52 ಲಕ್ಷ ಚರಸ್ತಿ ಹೊಂದಿದ್ದಾರೆ.

ಇದನ್ನೂ ಓದಿ: ಕೊನೆಯ ದಿನ ನಾಮಪತ್ರ ಜಾತ್ರೆ: ಗುರುವಾರ 1934 ಸೇರಿ ಒಟ್ಟು 5102 ಉಮೇದುವಾರಿಕೆ ಸಲ್ಲಿಕೆ

Last Updated : Apr 21, 2023, 12:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.