ಕಲಬುರಗಿ: ನಗರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಉತ್ತೀರ್ಣರಾಗಿರಲಿಲ್ಲ. ಮತ್ತೆ ಪರೀಕ್ಷೆಯನ್ನು ಬರೆದು ಪಾಸ್ ಆಗ್ಬೇಕು ಎಂಬ ಆಸೆಯನ್ನು ವಿದ್ಯಾರ್ಥಿಗಳ ಬ್ಯಾಚ್ವೊಂದು ಅರ್ಧಕ್ಕೆ ನಿಲ್ಲಿಸಿದೆ. ಅಲ್ಲದೇ, ನಂತರ ಎಣ್ಣೆ ಹೊಡೆಯೋದಕ್ಕೆ ಶುರು ಮಾಡಿದ ಅವರು ದುಡ್ಡು ಇದ್ದಾಗ ಹೈಫೈ ಬ್ರ್ಯಾಂಡ್ ಎಣ್ಣೆ ಕುಡಿದು ಮಜಾ ಮಾಡಿದ್ದಾರೆ. ಕೊನೆಗೆ ಹಣ ಖಾಲಿಯಾದಾಗ ವೈನ್ ಶಾಪ್ಗೆ ಕನ್ನ ಹಾಕಿದ್ದಾರೆ. ಇದೀಗ ಅವರು ಪೊಲೀಸರ ಅತಿಥಿಗಳಾಗಿದ್ದಾರೆ.
ನಗರದ ವಿವಿಧ ಬಡವಾಣೆಯ ನಿವಾಸಿಗಳಾದ ತುಷಾರ್, ಗುರುರಾಜ್, ಮೋಹನ್ ಎಂಬ ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬಿದ್ದು ಪಿಯುಸಿಯಲ್ಲಿ ಢುಮುಕಿ ಹೊಡೆದು ಪಿಯುಸಿಯಲ್ಲಿ ಫೆಲ್ಯೂವರ್ ಬ್ಯಾಚ್ ಅಂತಾನೆ ಫೇಮಸ್ ಆಗಿದ್ದರು. ಕಳೆದ ತಿಂಗಳು ನಗರದ ಹೊರವಲಯದ ಕೋಟನೂರ ಬಡಾವಣೆಯಲ್ಲಿರುವ ವೈನ್ ಶಾಪ್ ಬಾಗಿಲು ಮುರಿದು, ಹೈ ಫೈ ಬ್ರ್ಯಾಂಡ್ನ ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು.
ಎಣ್ಣೆಯನ್ನ ಕದ್ದು ಎಸ್ಕೇಪ್: ವೈನ್ ಶಾಪ್ನಲ್ಲಿ ಹಣ ಇದ್ರು ಕೂಡ ನಯಾ ಪೈಸೆಯನ್ನ ಮುಟ್ಟದೆ ತಮಗೆ ಬೇಕಾದ ಎಣ್ಣೆಯನ್ನ ಮಾತ್ರ ಕದ್ದು ಎಸ್ಕೇಪ್ ಆಗಿದ್ದರು. ಬೆಳಗ್ಗೆ ವೈನ್ ಶಾಪ್ ಮಾಲೀಕ ಅಂಗಡಿಗೆ ಬಂದಾಗ ಕಳ್ಳತನ ಆಗಿರೋದು ಬೆಳಕಿಗೆ ಬಂದಿತ್ತು. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಓದಿ: ಗಂಗಾವತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ 6 ಜನರ ಬಂಧನ.. ವಾಹನ-ಚಿನ್ನಾಭರಣ ವಶ