ETV Bharat / state

ವಸತಿ‌ ನಿಲಯ ಪ್ರಾರಂಭಿಸುವಂತೆ ಆಗ್ರಹ... ಪ್ರತಿಭಟನೆ ವೇಳೆ ವಿದ್ಯಾರ್ಥಿನಿ ಅಸ್ವಸ್ಥ - ಕಲಬುರಗಿ

ವಸತಿ‌ ನಿಲಯ ಪ್ರಾರಂಭಿಸುವಂತೆ ಆಗ್ರಹಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಅಸ್ವಸ್ಥಗೊಂಡಿದ್ದಾಳೆ.

ಕಲಬುರಗಿ
ಕಲಬುರಗಿ
author img

By

Published : Jan 5, 2021, 2:33 PM IST

ಕಲಬುರಗಿ: ವಸತಿ‌ ನಿಲಯ ಪ್ರಾರಂಭಿಸುವಂತೆ ಆಗ್ರಹಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿರುವ ವೇಳೆ ವಿದ್ಯಾರ್ಥಿನಿಯೋರ್ವಳು ಅಸ್ವಸ್ಥಗೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ವೇಳೆ ಘಟನೆ ನಡೆದಿದೆ. ಬಹಳ ಹೊತ್ತು ಕುಳಿತಿದ್ದರೂ ಯಾರೂ ಬಂದು ಕೇಳಿರಲಿಲ್ಲ. ಈ ವೇಳೆ ಪಟ್ಟು ಬಿಡದ ವಿದ್ಯಾರ್ಥಿನಿಯರು ಶಾಂತಿಯುತವಾಗಿ ಪ್ರತಿಭಟನೆ ಮುಂದುವರೆಸಿದ್ದರು.

ಪ್ರತಿಭಟನೆ ವೇಳೆ ವಿದ್ಯಾರ್ಥಿನಿ ಅಸ್ವಸ್ಥ

ಇನ್ನು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಎಂಜಿನಿಯರಿಂಗ್ ವಿದ್ಯಾರ್ಥಿನಿ ಶಿಲ್ಪಾ ಮೂರ್ಛೆ ಬಂದು ಕೆಳಗೆ ಬಿದ್ದು, ಅಸ್ವಸ್ಥಗೊಂಡಿದ್ದಾಳೆ. ಜ.4ರಂದು ಹಾಸ್ಟೆಲ್​ಗೆ ಬರಲು ವಾರ್ಡನ್ ಹೇಳಿದ್ದರೆನ್ನಲಾಗಿದೆ. ಇಂದು ಕೂಡ ಪ್ರವೇಶಕ್ಕೆ ಅನುಮತಿ‌ ನೀಡದ್ದಕ್ಕೆ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.