ಕಲಬುರಗಿ: ಮಹಾನಗರ ಪಾಲಿಕೆ ನೇತೃತ್ವದಲ್ಲಿ ಕಲಬುರಗಿಯಲ್ಲಿ ರಸ್ತೆ ಅಗಲೀಕರಣ ಕಾರ್ಯಕ್ಕೆ ಚಾಲನೆ ದೊರೆತಿದೆ.
ರಸ್ತೆಗಳು ಚಿಕ್ಕದಾಗಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣ ಕಾರ್ಯ ಮಾಡಲಾಗುತ್ತಿದ್ದು, ಹೊಸ ರಸ್ತೆ ನಿರ್ಮಿಸಲು ಪಾಲಿಕೆ ಮುಂದಾಗಿದೆ.
ಈಗಾಗಲೇ ರೋಜಾ ಪ್ರದೇಶದ ದರ್ಗಾ ರಸ್ತೆ ಅಗಲೀಕರಣ ಕೆಲಸ ನಡೆಯುತ್ತಿದೆ. ಪಾಕೀಜಾ ಕಾಂಪ್ಲೆಕ್ಸ್‌ನಿಂದ ರೋಜಾ ಪೊಲೀಸ್ ಠಾಣೆ ವರೆಗೆ ಇದ್ದ ಅಂಗಡಿ ಮತ್ತು ಮನೆಗಳನ್ನು ತೆರವುಗೊಳಿಸಲಾಗುತ್ತಿದೆ.