ETV Bharat / state

ಸೋಲಾಪುರ -ಹಾಸನ ನಡುವಿನ ರೈಲು ಸಂಚಾರ ನಾಲ್ಕು ದಿನ ರದ್ದು

ಯಲಹಂಕ ವಿಭಾಗದಲ್ಲಿ ರೈಲು ಹಳಿ ಡಬ್ಲಿಂಗ್ ಕಾರ್ಯ ನಡೆಸುವ ಹಿನ್ನೆಲೆಯಲ್ಲಿ ಸೋಲಾಪುರ-ಹಾಸನ ಹಾಗೂ ಹಾಸನ ಟು ಸೋಲಾಪುರ ಸಂಚರಿಸುವ ರೈಲುಗಳ ಸಂಚಾರವನ್ನು ನಾಲ್ಕು ದಿನಗಳ ಕಾಲ ರದ್ದು ಮಾಡಲಾಗಿದೆ.

train travel canceled
ರೈಲು ಸಂಚಾರ ನಾಲ್ಕು ದಿನ ರದ್ದು
author img

By

Published : Oct 10, 2021, 4:22 PM IST

ಕಲಬುರಗಿ: ಸೋಲಾಪುರ-ಹಾಸನ ಹಾಗೂ ಹಾಸನ ಟು ಸೋಲಾಪುರ ಸಂಚರಿಸುವ ರೈಲುಗಳ ಸಂಚಾರವನ್ನು ನಾಲ್ಕು ದಿನಗಳ ಕಾಲ ರದ್ದು ಮಾಡಲಾಗಿದೆ ಎಂದು ಕಲಬುರಗಿ ರೈಲ್ವೆ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ನವೆಂಬರ್​ 16 ರಿಂದ 19ರವರೆಗೆ ಸೋಲಾಪುರದಿಂದ ಹಾಸನಕ್ಕೆ ತೆರಳುವ ಸೋಲಾಪುರ-ಹಾಸನ ಎಕ್ಸ್‌ಪ್ರೆಸ್ ರೈಲಿನ (ಟ್ರೈನ್ ಸಂಖ್ಯೆ 01311) ಸಂಚಾರ ರದ್ದುಪಡಿಸಲಾಗಿದೆ. ಅದರಂತೆ ನ.17 ರಿಂದ 20 ರವರೆಗೆ ಹಾಸನದಿಂದ ಸೋಲಾಪುರಕ್ಕೆ ತೆರಳುವ ಹಾಸನ-ಸೋಲಾಪುರ ರೈಲಿನ (ಟ್ರೈನ್ ಸಂಖ್ಯೆ 01312 ) ಸಂಚಾರ ರದ್ದು ಮಾಡಲಾಗಿದೆ.

ಯಲಹಂಕ ವಿಭಾಗದಲ್ಲಿ ರೈಲು ಹಳಿ ಡಬ್ಲಿಂಗ್ ಕಾರ್ಯ ನಿಮಿತ್ತ ನಾಲ್ಕು ದಿನ ಎರಡು ರೈಲುಗಳು ಓಡಾಡುವುದಿಲ್ಲ. ಇದೇ ಮಾರ್ಗದಲ್ಲಿ ಸೋಲಾಪುರ, ಕಲಬುರಗಿ, ಯಾದಗಿರಿ, ರಾಯಚೂರು ಸೇರಿದಂತೆ ಈ ಭಾಗದ ಜನರು ರಾಜಧಾನಿ ಬೆಂಗಳೂರಿಗೆ ತೆರಳುತ್ತಿದ್ದರು. ಈ ನಾಲ್ಕು ದಿನಗಳ ಮಟ್ಟಿಗೆ ಪ್ರಯಾಣಿಕರು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ.

ಇದನ್ನೂ ಓದಿ: ಹಣಕಾಸು ಸ್ಥಿತಿ ನೋಡಿಕೊಂಡು ಪೆಟ್ರೋಲ್, ಡೀಸೆಲ್ ಸುಂಕ ಇಳಿಕೆ ನಿರ್ಧಾರ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.