ಸೇಡಂ: ಇತ್ತೀಚೆಗೆ ಅನಾರೋಗ್ಯದಿಂದ ಅಕಾಲಿಕ ಮರಣ ಹೊಂದಿದ ಕಾಂಗ್ರೆಸ್ ಮುಖಂಡ ಭದ್ದು ಚವ್ಹಾಣ್ (68) ಅವರ ಮನೆಗೆ ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಕಳೆದ ಸೆ. 24 ರಂದು ತಾಲೂಕಿನ ಮಳಖೇಡ ಸ್ಟೇಷನ್ ತಾಂಡಾದ ಭದ್ದು ಚವ್ಹಾಣ್ ಹೈದರಾಬಾದ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಮೃತನ ನಿವಾಸಕ್ಕೆ ತೆರಳಿದ ಶರಣಪ್ರಕಾಶ್ ಪಾಟೀಲ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಅವರೊಂದಿಗೆ ಕಾಂಗ್ರೆಸ್ ಮುಖಂಡ ರಾಜಶೇಖರ್ ಪುರಾಣಿಕ್, ರತನಕುಮಾರ, ರವಿಕುಮಾರ ಪವಾರ, ರಮೇಶ ರಾಠೋಡ್, ಪ್ರತಾಪಸಿಂಗ್ ಚವ್ಹಾಣ್, ಲಕ್ಷ್ಮಣ್ ಚವ್ಹಾಣ, ಪ್ರಕಾಶ ರಾಠೋಡ್ ಇದ್ದರು.