ETV Bharat / state

ಅತಿಥಿ ಶಿಕ್ಷಕಿ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಕಲಬುರಗಿಯಲ್ಲಿ ಪ್ರಭಾರ ಮುಖ್ಯೋಪಾಧ್ಯಾಯ ಪೊಲೀಸ್ ವಶಕ್ಕೆ - ಪ್ರಭಾರ ಮುಖ್ಯೋಪಾಧ್ಯಾಯ ಪೊಲೀಸ್ ವಶಕ್ಕೆ

Sexual harassment Allegations:ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸುವುದು, ಮೈ ಮುಟ್ಟುವುದು ಮಾಡುತ್ತಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸರ್ಕಾರಿ ಪ್ರೌಢ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

kalaburagi
ವಾಡಿ ಪೊಲೀಸ್ ಠಾಣೆ
author img

By ETV Bharat Karnataka Team

Published : Sep 3, 2023, 2:31 PM IST

ಕಲಬುರಗಿ: ನಾನು ನಿಮ್ಮ ಸೋದರಮಾವ ಇದ್ದಂಗೆ ಎಂದು ವಿದ್ಯಾರ್ಥಿನಿಯರಿಗೆ ಮತ್ತು ಅತಿಥಿ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರನ್ನು ವಾಡಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.‌

ಚಿತ್ತಾಪುರ ತಾಲೂಕಿನ ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸುವುದು, ಮೈ ಮುಟ್ಟುವುದು ಮಾಡುತ್ತಿದ್ದರಂತೆ. ಅಲ್ಲದೇ ನಾನು ನಿಮ್ಮ ಸೋದರ ಮಾವ, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತೆ ಹೇಳುತ್ತಿದ್ದರಂತೆ. ಅತಿಥಿ ಶಿಕ್ಷಕಿಗೂ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ವಿದ್ಯಾರ್ಥಿನಿಯರು ಈ ಕುರಿತು ಬಿಇಒಗೆ ದೂರು ನೀಡಿದ್ದರು. ವಿದ್ಯಾರ್ಥಿನಿಯರ ನೀಡಿದ ದೂರಿನ ಆಧಾರದ ಮೇಲೆ ಚಿತ್ತಾಪುರ ಬಿಇಒ ಅವರು ವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಿಇಒ ನೀಡಿದ ದೂರಿನ ಮೇರೆಗೆ ವಾಡಿ ಠಾಣೆ ಪೊಲೀಸರು ಮುಖ್ಯೋಪಾಧ್ಯಾಯರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ಸದ್ಯ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್​ಪಿ ಇಶಾಪಂತ್​ ಮಾಹಿತಿ ನೀಡಿದ್ದಾರೆ.

ಪಿಎಸ್‍ಐಗಳಿಗೆ ನಗದು ಬಹುಮಾನ: ಪ್ರಕರಣಗಳಲ್ಲಿ ನೊಂದ ಜನರಿಗೆ ಸ್ಪಂದನೆ ನೀಡಿ ನ್ಯಾಯ ಒದಗಿಸಿಕೊಟ್ಟ ಚಿತ್ತಾಪುರ ಠಾಣೆಯ ಪಿಎಸ್‍ಐ ಶ್ರೀಶೈಲ ಅಂಬಾಜಿ, ವಾಡಿ ಠಾಣೆಯ ಪಿಎಸ್‍ಐ ತಿರುಮಲ್ಲೇಶ ಕುಂಬಾರ ಅವರಿಗೆ ಜಿಲ್ಲಾ ಪೊಲೀಸ್​ ಅಧೀಕ್ಷಕಿ ಇಶಾಪಂತ್​ ನಗದು ಬಹುಮಾನ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.

ಜನಸ್ನೇಹಿ ಪೊಲೀಸ್ ವಾತಾವರಣಕ್ಕೆ ಸಹಕಾರ ಅಗತ್ಯ: ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆ, ಸಮಾಜದಲ್ಲಿ ಶಾಂತಿ ಕಾಪಾಡುವುದು, ನಾಗರಿಕ ಸುರಕ್ಷತೆ, ಅಪರಾಧಗಳನ್ನು ತಡೆಗಟ್ಟುವುದು, ಸೌಹಾರ್ದತೆಯ ವಾತಾವರಣ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತದೆ. ಅಪರಾಧಗಳನ್ನು ಮಟ್ಟಹಾಕಿ, ಕಾನೂನು ರಕ್ಷಣೆ ಮಾಡುವಲ್ಲಿ, ಜನಸ್ನೇಹಿ ಪೊಲೀಸ್ ವಾತಾವರಣ ನಿರ್ಮಿಸಲು ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಜೇವರ್ಗಿ ಪಿಎಸ್‍ಐ ಸುರೇಶಕುಮಾರ ಚವ್ಹಾಣ ಮನವಿ ಮಾಡಿದರು.

ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಜರುಗಿದ 'ಜನಸ್ನೇಹಿ ಪೊಲೀಸ್ ಅಭಿಯಾನ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಪೊಲೀಸ್ ಠಾಣೆ, ಸಿಬ್ಬಂದಿಯ ಬಗ್ಗೆ ಭಯ ಬೇಡ, ಗೌರವ ನೀಡಿ. ಅವರನ್ನು ಮಾನವೀಯತೆಯಿಂದ ಕಾಣಿ. ಅಪರಾಧ ಕಾರ್ಯಗಳನ್ನು ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಕೈ ಜೋಡಿಸಿ. ವಿದ್ಯಾರ್ಥಿ ದೆಸೆಯಿಂದಲೇ ಕಾಯ್ದೆ-ಕಾನೂನುಗಳನ್ನು ತಿಳಿದುಕೊಂಡು ಅನುಸರಿಸಿ. ಪೊಲೀಸ್‍ರು ದಂಡ ವಿಧಿಸುವುದು ಸಾರ್ವಜನಿಕರ ಶೋಷಣೆಗಾಗಿ ಅಲ್ಲ, ಬದಲಿಗೆ ಅಪರಾಧ ಪುನರಾವರ್ತನೆಯಾಗಬಾರದು ಎಂಬ ಉದ್ದೇಶದಿಂದ ಎಂಬುದನ್ನು ತಿಳಿಯಬೇಕು ಎಂದರು.

ಜತೆಗೆ ರಸ್ತೆ ನಿಯಮಗಳು, ಸಾಮಾನ್ಯ ಕಾನೂನಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಪಿಎಸ್‍ಐ ಸುರೇಶಕುಮಾರ ತಿಳಿಸಿದರು. ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​ ಕಾಶಿಂಬಿ ಅವರು ಪೋಕ್ಸೊ ಕಾಯ್ದೆ, ಮಹಿಳಾ ಕಾನೂನುಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಹಾಗೂ ಎನ್.ಎಸ್.ಎಸ್ ಅಧಿಕಾರಿ ಹೆಚ್.ಬಿ.ಪಾಟೀಲ, ಉಪನ್ಯಾಸಕ ಬಸಲಿಂಗಪ್ಪ ನಾಡಗೌಡ್, ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‍ಐ ಸಿದ್ರಾಮಪ್ಪ ನಿಂಬರ್ಗಾ, ಎಎಸ್‍ಐ ಜಗದೇವಿ, ಹೆಡ್ ಕಾನ್ಸ್​ಟೇಬಲ್ ಮೌಲಪ್ಪ, ಬರಹಗಾರರಾದ ಲಾಲಪ್ಪ ಹಾಗೂ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ಇದನ್ನೂ ಓದಿ: ಗಗನಸಖಿ ಜೊತೆ ಅಸಭ್ಯ ವರ್ತನೆ: ಮಾಲ್ಡೀವ್ಸ್ ಪ್ರಜೆ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.