ETV Bharat / state

ನಮ್ ಶಾಲೆ ಬಿಟ್ಟು ಹೋಗಬೇಡಿ ಸರ್​​.. ನೆಚ್ಚಿನ ಶಿಕ್ಷಕರ ವರ್ಗಾವಣೆಗೆ ಮಕ್ಕಳು, ಸಹೋದ್ಯೋಗಿಗಳ ಕಣ್ಣೀರು - ನೆಚ್ಚಿನ ಶಿಕ್ಷಕನ ವರ್ಗಾವಣೆಗೆ ಕಣ್ಣೀರಿಟ್ಟ ಮಕ್ಕಳು

ಲಿಂಗಂಪಲ್ಲಿ ಗ್ರಾಮದ ಶಾಲೆಯಲ್ಲಿ ನೆಚ್ಚಿನ ಶಿಕ್ಷಕರು ತಮ್ಮ ಶಾಲೆಯಿಂದ ವರ್ಗಾವಣೆಗೊಂಡು ತೆರಳುತ್ತಿರುವಾಗ ವಿದ್ಯಾರ್ಥಿಗಳು ಹಾಗೂ ಇತರ ಸಹೋದ್ಯೋಗಿ ಶಿಕ್ಷಕರು ಗಳಗಳನೆ ಕಣ್ಣೀರಿಟ್ಟರು.

sedam students tears for teacher transfer
ಶಿಕ್ಷಕರ ವರ್ಗಾವಣೆಗೆ ಮಕ್ಕಳ ಕಣ್ಣೀರು
author img

By

Published : Dec 11, 2021, 2:03 AM IST

Updated : Dec 11, 2021, 5:42 AM IST

ಸೇಡಂ: ಅಚ್ಚುಮೆಚ್ಚಿನ ಶಿಕ್ಷಕರು ತಮ್ಮ ಶಾಲೆಯಿಂದ ವರ್ಗಾವಣೆಗೊಂಡು ತೆರಳುತ್ತಿರುವಾಗ ವಿದ್ಯಾರ್ಥಿಗಳು ಹಾಗೂ ಇತರ ಸಹೋದ್ಯೋಗಿ ಶಿಕ್ಷಕರು ಗಳಗಳನೆ ಕಣ್ಣೀರಿಟ್ಟ ಪ್ರಸಂಗ ತಾಲೂಕಿನ ಲಿಂಗಂಪಲ್ಲಿ ಗ್ರಾಮದಲ್ಲಿ ನಡೆಯಿತು.

ಲಿಂಗಂಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕರಾದ ರಾಘವೇಂದ್ರ ಕುಲಕರ್ಣಿ ಅವರು ವರ್ಗಾವಣೆಯಾದ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ ಅವರ ಕಾಲಿಗೆ ಬಿದ್ದ ಸಹೋದ್ಯೋಗಿ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಕಣ್ಣೀರಿನ ವಿದಾಯ ಹೇಳಿದರು.

ನೆಚ್ಚಿನ ಶಿಕ್ಷಕರ ವರ್ಗಾವಣೆಗೆ ಮಕ್ಕಳು, ಸಹೋದ್ಯೋಗಿಗಳ ಕಣ್ಣೀರು

ಮಕ್ಕಳು ಹಾಗೂ ಸಹೋದ್ಯೋಗಿಗಳು ಕಣ್ಣೀರಿಡುತ್ತ ಕಾಲಿಗೆ ಬಿದ್ದು ನಮಸ್ಕರಿಸುತ್ತಿರುವುದನ್ನು ಕಂಡ ಶಿಕ್ಷಕ ರಾಘವೇಂದ್ರ ಕುಲಕರ್ಣಿ ಅವರೂ ಕೂಡ ಭಾವುಕರಾದರು. ಸಹೋದ್ಯೋಗಿಗಳನ್ನು ತಬ್ಬಿಕೊಂಡು ಅವರೂ ಕೂಡ ಅಳುತ್ತಿರುವ ವಿಡಿಯೋ ವೈರಲ್ ಆಗಿದೆ.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.

ಇದನ್ನೂ ಓದಿ: ತೆರಿಗೆ ಬಾಕಿ ಪ್ರಕರಣ: ಮಂತ್ರಿ ಮಾಲ್​ ಬೀಗ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ

Last Updated : Dec 11, 2021, 5:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.