ETV Bharat / state

ಬೇಗ್ - ವಿಶ್ವನಾಥ್ ಇಬ್ಬರಿಗೂ ಹೈಕಮಾಂಡ್‌ ಸೂಕ್ತ ಸ್ಥಾನ ನೀಡಲಿದೆ: ಎಸ್ ಟಿ ಸೋಮಶೇಖರ್ - Cooperative Minister ST Somashekhar

ಮಾಜಿ ಸಂಸದ ಹೆಚ್​. ವಿಶ್ವನಾಥ್ ಹಾಗೂ ಮಾಜಿ ಶಾಸಕ ರೋಷನ್ ಬೇಗ್ ಜೊತೆ ನಾವಿದ್ದೇವೆ. ನಮ್ಮೆಲ್ಲರ ಜೊತೆಗೆ ಬಿಜೆಪಿ ಇದೆ. ಇವರಿಬ್ಬರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಬಗ್ಗೆ ಎಲ್ಲಾ ಸಚಿವರು ಸೇರಿ ಸಿಎಂ ಅವರಿಗೆ ಮನವಿ ಮಾಡಿದ್ದೇವೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

S T Somashekhar
ಎಸ್ ಟಿ ಸೋಮಶೇಖರ್.
author img

By

Published : Jun 26, 2020, 12:25 PM IST

ಕಲಬುರಗಿ: ರಾಜ್ಯ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಹೆಚ್. ವಿಶ್ವನಾಥ್ ಹಾಗೂ ರೋಷನ್ ಬೇಗ್ ಇಬ್ಬರಿಗೂ ಸೂಕ್ತ ಸ್ಥಾನಮಾನ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದ್ದಾರೆ.

ರೋಷನ್​ ಬೇಗ್​, ಹೆಚ್​ ವಿಶ್ವನಾಥ್​ಗೆ ಸ್ಥಾನಮಾನ ಕುರಿತು ಎಸ್ ಟಿ ಸೋಮಶೇಖರ್ ಪ್ರತಿಕ್ರಿಯೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆಗೆ ರೋಷನ್ ಬೇಗ ಕೂಡ ಕಾರಣಿಕರ್ತರಾಗಿದ್ದಾರೆ. ರೋಷನ್ ಬೇಗ್ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ಹೀಗಾಗಿ ಬೇಗ್ ಮತ್ತು ವಿಶ್ವನಾಥ್ ಇಬ್ಬರಿಗೂ ಹೈಕಮಾಂಡ್​ ಸೂಕ್ತ ಸ್ಥಾನಮಾನ ನೀಡಲಿದೆ ಎಂದು ತಿಳಿಸಿದರು.

ಈ ಇಬ್ಬರ ಜೊತೆ ನಾವಿದ್ದೇವೆ. ನಮ್ಮೆಲ್ಲರ ಜೊತೆಗೆ ಬಿಜೆಪಿ ಇದೆ. ಸೂಕ್ತ ಸ್ಥಾನಮಾನದ ಬಗ್ಗೆ ಎಲ್ಲಾ ಸಚಿವರು ಸೇರಿ ಸಿಎಂ ಅವರಿಗೆ ಮನವಿ ಮಾಡಿದ್ದೇವೆ. ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ಸೋಮಶೇಖರ್​ ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.