ETV Bharat / state

ಲಾಕ್​ಡೌನ್​ ಉಲ್ಲಂಘಿಸಿ ರಾವೂರ​ ಜಾತ್ರೋತ್ಸವ: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ - ಲಾಕ್​ಡೌನ್​ ಉಲ್ಲಂಘಿಸಿ ನಡೆದ ರಾವೂರ​ ಜಾತ್ರೋತ್ಸವ

ಲಾಕ್​​ಡೌನ್ ಆದೇಶ ಉಲ್ಲಂಘಿಸಿ ಜಿಲ್ಲೆಯ ರಾವೂರ್ ಗ್ರಾಮದಲ್ಲಿ ರಥೋತ್ಸವ ನೆರವೇರಿಸಿದ ಜಾತ್ರೋತ್ಸವ ಸಮಿತಿ ವಿರುದ್ಧ ಹಾಗೂ ಪ್ರಕರಣದಲ್ಲಿ ಬಲಿಪಶುವಾಗಿರುವ ಪಿಎಸ್​​ಐ ವಿಜಯಕುಮಾರ್ ಬಾವಗಿ ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಕೆಲ ಸಂಘಟನಾಕಾರರು ಎಸ್ಪಿ ಯಡಾ‌ ಮಾರ್ಟಿನ್ ಅವರಿಗೆ ಮನವಿ ಮಾಡಿದ್ದು, ಸಾಮಾಜಿಕ ಜಾಲತಾಣವಾದ ಫೇಸ್​​​​​ಬುಕ್​​​ , ವಾಟ್ಸ್​ಆ್ಯಪ್​​ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

Rawura Jothra festival held in violation of lockdown
ಲಾಕ್​ಡೌನ್​ ಉಲ್ಲಂಘಿಸಿ ನಡೆದ ರಾವೂರ​ ಜಾತ್ರೋತ್ಸವ
author img

By

Published : Apr 17, 2020, 1:59 PM IST

ಕಲಬುರಗಿ : ಲಾಕ್​​ಡೌನ್ ಆದೇಶ ಉಲ್ಲಂಘಿಸಿ ಜಿಲ್ಲೆಯ ರಾವೂರ್ ಗ್ರಾಮದಲ್ಲಿ ರಥೋತ್ಸವ ನೆರವೇರಿಸಿದ ಜಾತ್ರೋತ್ಸವ ಸಮಿತಿ ವಿರುದ್ಧ ಹಾಗೂ ಪ್ರಕರಣದಲ್ಲಿ ಬಲಿಪಶುವಾಗಿರುವ ಪಿಎಸ್​​ಐ ವಿಜಯಕುಮಾರ್ ಬಾವಗಿ ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಕೆಲ ಸಂಘಟನಾಕಾರರು ಎಸ್ಪಿ ಯಡಾ‌ ಮಾರ್ಟಿನ್ ಅವರಿಗೆ ಮನವಿ ಮಾಡಿದ್ದಾರೆ.

facebook post
ಫೇಸ್​​ಬುಕ್​​ ಆ್ಯಪ್​

ಜಾತ್ರೆ ರದ್ದು ಪಡಿಸಿರುವುದಾಗಿ ಸ್ವತಃ ಜಾತ್ರೋತ್ಸವ ಸಮಿತಿ ಪತ್ರಿಕೆ ಹೇಳಿಕೆ ಮೂಲಕ ಸಂದೇಶ ರವಾನಿಸಿತ್ತು. ಪೊಲೀಸರೊಂದಿಗೆ ಸಭೆ ನಡೆಸಿದಾಗಲೂ ಯಾವುದೇ ಕಾರಣಕ್ಕೂ ಜಾತ್ರೆ ನಡೆಸುವುದಿಲ್ಲ ಎಂದು ಹೇಳಿದ ಸಮಿತಿ ಮುಖಂಡರು ಏಕಾಏಕಿ ಬೆಳ್ಳಗೆ 6 ಗಂಟೆಗೆ ಸಾವಿರಾರು ಜನರನ್ನು ಸೇರಿಸಿ ರಥೋತ್ಸವ ನೆರೆವೆರಿಸುವ ಮೂಲಕ ಲಾಕ್​​ಡೌನ್ ಆದೇಶ ಉಲ್ಲಂಘಿಸಿದ್ದಾರೆ.

ಪಿಎಸ್ಐ ಬಾವಗಿ ಬೆನ್ನಿಗೆ ನಿಂತ ಜನತೆ:

ಪ್ರಕರಣದಲ್ಲಿ ಯಾವುದೇ ತಪ್ಪು ಮಾಡದೇ ಲಾಕ್​ಡೌನ್​​ ಆದೇಶವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಪ್ರಾಮಾಣಿಕ ಅಧಿಕಾರಿ ವಿಜಯ್​ ಕುಮಾರ್ ಬಾವಗಿ ಅವರನ್ನು ವಿನಾಕಾರಣ ಬಲಿಪಶು ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಅವರು ಪಿಎಸ್ಐ ಬಾವಗಿ ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಹಾಗೂ ಲಾಕ್​ಡೌನ್​ಗೆ ಬೆಲೆ ಕೊಡದೆ ಆದೇಶವನ್ನು ಧಿಕ್ಕರಿಸಿ ರಥೋತ್ಸವ ನೆರವೇರಿಸಿದ ಜಾತ್ರೆ ಸಮಿತಿ ಸದಸ್ಯರನ್ನು ಬಂಧಿಸುವಂತೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್, ವಾಟ್ಸ್​​ಆ್ಯಪ್​​ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಕೊಡಲೇ ಅಮಾನತು ಆದೇಶ ಹಿಂಪಡೆದು ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.