ಕಲಬುರಗಿ : ಅಪ್ರಾಪ್ತೆಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ವೆಸಗಿದ್ದ ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ 2ನೇ ಅಪರ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
![rape case culprit sentenced to life imprisonment](https://etvbharatimages.akamaized.net/etvbharat/prod-images/kn-klb-01-rape-case-court-order-ka10050_19012021134455_1901f_01136_967.jpg)
![rape case culprit sentenced to life imprisonment](https://etvbharatimages.akamaized.net/etvbharat/prod-images/kn-klb-01-rape-case-court-order-ka10050_19012021134448_1901f_01136_376.jpg)
ಪ್ರಕರಣದ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗೋಪಾಲಪ್ಪ ಎಸ್. ಆಪಾಧಿತನಿಗೆ ಕಲಂ 366(A) ಐಪಿಸಿ ಅನ್ವಯ 10 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ದಂಡ, ಕಲಂ 376(2)(N) ಮತ್ತು ಕಲಂ 6 (ಪೋಸ್ಕೊ ಕಾಯ್ದೆ) ಅಡಿಯಲ್ಲಿ ಕಠಿಣ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡ, ಕಲಂ 342 ಐಪಿಸಿ ಅಡಿಯಲ್ಲಿ ಒಂದು ವರ್ಷ ಕಠಿಣ ಶಿಕ್ಷೆ 10 ಸಾವಿರ ರೂಪಾಯಿ ದಂಡ, ಕಲಂ 506 ಐಪಿಸಿ ಅಡಿಯಲ್ಲಿ ಎರಡು ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಜಿಲ್ಲಾ ಕಾನೂನು ಪ್ರಾಧಿಕಾರ ಸಮಿತಿಯಿಂದ ನೊಂದ ಬಾಲಕಿಗೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ (ಪೋಸ್ಕೋ) ಎಲ್ ವಿ ಚಟ್ನಾಳಕರ್ ಸಾಕ್ಷಿ ಮಂಡಿಸಿದ್ದು, ವಿಶೇಷ ಸರ್ಕಾರಿ ಅಭಿಯೋಜಕಿ ಸಾವಿತ್ರಿ ಎಸ್ ಘಂಟಿಮಠ ವಾದ ಮಂಡಿಸಿದ್ದಾರೆ.