ETV Bharat / state

ಕಲಬುರಗಿ ಓಪನ್: 57 ದಿನದ ಅಂತರದಲ್ಲಿ ಮೂರು ಐಟಿಎಫ್ ಪ್ರಶಸ್ತಿ ಮುಡಿಗೇರಿಸಿಕೊಂಡ ರಾಮಕುಮಾರ್ - ETV Bharath Kannada news

ITF Kalaburagi Open: ಕಲಬುರಗಿ ಓಪನ್​ ಫೈನಲ್​ನಲ್ಲಿ ಭಾರತದ ರಾಮಕುಮಾರ್ ರಾಮನಾಥನ್ ಆಸ್ಟ್ರಿಯಾದ ಪ್ರತಿಸ್ಪರ್ಧಿ ಡೇವಿಡ್ ಪಿಚ್ಲರ್​ ವಿರುದ್ಧ 6-2, 6-1 ರಿಂದ ಗೆಲುವು ಸಾಧಿಸಿದ್ದಾರೆ.

Ramkumar Ramanathan
Ramkumar Ramanathan
author img

By ETV Bharat Karnataka Team

Published : Dec 3, 2023, 9:04 PM IST

ಕಲಬುರಗಿ: ಭಾರತದ ರಾಮಕುಮಾರ್ ರಾಮನಾಥನ್ ಅವರು ಭಾನುವಾರ ಇಲ್ಲಿ ನಡೆದ ಕಲಬುರಗಿ ಓಪನ್‌ನಲ್ಲಿ ಗೆದ್ದು ಮೂರನೇ ಐಟಿಎಫ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಕಳೆದ ವಾರ ಐಟಿಎಫ್ ಮುಂಬೈ ಓಪನ್ ಗೆದ್ದಿದ್ದ ರಾಮ್‌ಕುಮಾರ್, ಚಂದ್ರಶೇಖರ್ ಪಾಟೀಲ್ ಸ್ಟೇಡಿಯಂನಲ್ಲಿ ಆಸ್ಟ್ರಿಯಾದ ಪ್ರತಿಸ್ಪರ್ಧಿ ಡೇವಿಡ್ ಪಿಚ್ಲರ್ ಅವರ ಸವಾಲನ್ನು ಕೇವಲ 64 ನಿಮಿಷದಲ್ಲಿ 6-2, 6-1 ರಿಂದ ಮಣಿಸಿದರು. 57 ದಿನಗಳ ಅವಧಿಯಲ್ಲಿ ಮೂರನೇ ಐಟಿಎಫ್ ಪ್ರಶಸ್ತಿಯನ್ನು ಗೆದ್ದ ಕೀರ್ತಿಗೆ ಪಾತ್ರರಾದರು.

ಭಾರತೀಯ ಡೇವಿಸ್ ಕಪ್ ತಂಡದ ಸದಸ್ಯರಾದ ರಾಮ್‌ಕುಮಾರ್ ಫೈನಲ್​ ಪಂದ್ಯವನ್ನು ಗೆದ್ದು3,200 ಯುಎಸ್​ ಡಾಲರ್​ ಮೊತ್ತವನ್ನು ಮತ್ತು 25 ಎಟಿಪಿ ಅಂಕವನ್ನು ಪಡೆದುಕೊಂಡರು. ಡೇವಿಡ್ ಪಿಚ್ಲರ್ 16 ಎಟಿಪಿ ಪಾಯಿಂಟ್‌ ಜೊತೆಗೆ 2,120 ಯುಎಸ್​ ಡಾಲರ್​ಗೆ ತೃಪ್ತಿ ಪಡಬೇಕಾಯಿತು.

Ramkumar Ramanathan
ರಾಮಕುಮಾರ್ ರಾಮನಾಥನ್ vs ಡೇವಿಡ್ ಪಿಚ್ಲರ್

"ಬ್ಯಾಕ್-ಟು-ಬ್ಯಾಕ್ ಪ್ರಶಸ್ತಿಗಳನ್ನು ಗೆಲ್ಲುವುದು ಉತ್ತಮವಾಗಿದೆ. ನನ್ನ ಆಟವು ಉತ್ತಮವಾಗಿ ಸಾಗುತ್ತಿದೆ. ಕಳೆದ ಎರಡು ವಾರಗಳಲ್ಲಿ ನಾನು ನನ್ನ ಅತ್ಯುತ್ತಮ ಟೆನಿಸ್‌ಗಳನ್ನು ಆಡಿದ್ದೇನೆ. ಇಲ್ಲಿನ ಮೈದಾನಗಳು ಆರಂಭದಲ್ಲಿ ನನ್ನ ಆಟಕ್ಕೆ ಹೊಂದಿಕೆಯಾಗಲಿಲ್ಲ, ಆದರೆ ನಾನು ಬೇಗನೆ ಅವುಗಳಿಗೆ ಹೊಂದಿಕೊಂಡೆ"ಎಂದು ವಿಜಯದ ನಂತರ ರಾಮ್‌ಕುಮಾರ್ ಹೇಳಿದರು.

ಕಿಕ್ಕಿರಿದ ಕ್ರೀಡಾಂಗಣದಲ್ಲಿ ತವರಿನ ಪ್ರೇಕ್ಷಕರ ಮುಂದೆ ಆಟವಾಡುತ್ತಿದ್ದ ರಾಮ್‌ಕುಮಾರ್ ತನ್ನ ಮೊದಲ ಸರ್ವ್​ನಲ್ಲಿ ಉತ್ತಮ ಉತ್ತೇಜಿತನಾಗಿದ್ದರು. ಮೊದಲ ಐದು ಗೇಮ್‌ಗಳಲ್ಲಿ ಇಬ್ಬರೂ ಆಟಗಾರರು ತಮ್ಮ ಸರ್ವ್‌ಗಳನ್ನು ಹಿಡಿದಿಟ್ಟುಕೊಂಡ ನಂತರ, ರಾಮ್‌ಕುಮಾರ್ 6ನೇ ಆರನೇ ಗೇಮ್‌ನಲ್ಲಿ ಪಿಚ್ಲರ್ ಅವರ ಸರ್ವ್ ಅನ್ನು ಕಟ್​ ಮಾಡಿದರು. ಹಾಗೇ ಮೊದಲ ಸೆಟ್​ನಲ್ಲಿ ಮುನ್ನಡೆ ಕಾಯ್ದುಕೊಂಡರು. ಡೇವಿಡ್ ಪಿಚ್ಲರ್ ಅವರನ್ನು ಮೊದಲ ಗೇಮ್​ನಲ್ಲಿ 6-2ರಿಂದ ಮಣಿಸಿದರು.

ಎರಡನೇ ಸೆಟ್ ಡೇವಿಡ್‌ನಿಂದ ಹೋರಾಟದ ಭರವಸೆ ನೀಡಿತು, ಅವರು ತಮ್ಮ ಸರ್ವ್‌ನಲ್ಲಿ ಕೇವಲ ಒಂದು ಅಂಕವನ್ನು ಕಳೆದುಕೊಂಡರು, ಆದರೆ ರಾಮ್‌ಕುಮಾರ್ ವಿಭಿನ್ನ ಯೋಜನೆಗಳನ್ನು ಹೊಂದಿದ್ದರು. ಬಹಳ ದೃಢತೆಯಿಂದ ಚಲಿಸುತ್ತಾ, ಅವರು ಪಿಚ್ಲರ್‌ನನ್ನು ತಪ್ಪುಗಳನ್ನು ಮಾಡುವಂತೆ ಮಾಡಿದರು. ಈ ಮೂಲಕ ಎರಡನೇ ಸೆಟ್​ನ್ನು ರಾಮ್‌ಕುಮಾರ್ 6-1ರಿಂದ ಗೆದ್ದುಕೊಂಡರು.

ಶನಿವಾರ ನಡೆದ ಸೆಮೀಸ್​ನಲ್ಲಿ ರಾಮ್‌ಕುಮಾರ್ ರಾಮನಾಥನ್ ಅವರು ಜಪಾನಿನ ರೊಟಾರೋ ತಗುಚಿ ವಿರುದ್ಧ ಕೇವಲ 65 ನಿಮಿಷದ ಆಟದಲ್ಲಿ 6-2, 6-1 ಅಂತರದಲ್ಲಿ ಜಯ ದಾಖಲಿಸಿ ಫೈನಲ್ ಪ್ರವೇಶಿಸಿದ್ದರು.

ಡಬಲ್ಸ್​ ಫೈನಲ್​: ನಿನ್ನೆ ನಡೆದ ಡಬಲ್ಸ್​ ಫೈನಲ್​ನಲ್ಲಿ ಜಪಾನ್‌ನ ತಗುಚಿ - ಮತ್ಸುದಾ ಜೋಡಿ ಡಬಲ್ಸ್ ಕಿರೀಟವನ್ನು ಎತ್ತಿ ಹಿಡಿದರು. ಜಪಾನ್ ಜೋಡಿಯು ಇಂಡೋ-ಆಸ್ಟ್ರಿಯನ್ ಜೋಡಿಯಾದ ನಿತಿನ್ ಕುಮಾರ್ ಸಿನ್ಹಾ ಮತ್ತು ಡೇವಿಡ್ ಪಿಚ್ಲರ್ ವಿರುದ್ಧ 6-4, 2-6, 10-7 ಅಂಕಗಳ ಅಂತರದಲ್ಲಿ ಗೆಲುವು ದಾಖಲಿಸಿದರು.

ಇದನ್ನೂ ಓದಿ: ಕಲಬುರಗಿ ಓಪನ್‍ ಟೆನಿಸ್: ಬ್ಯಾಕ್ ಟು ಬ್ಯಾಕ್ ಐಟಿಎಫ್ ಟೈಟಲ್‍ನತ್ತ ರಾಮ್‍ಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.