ETV Bharat / state

ಸೇಡಂ: ಕ್ವಾರಂಟೈನ್​ ನಲ್ಲಿದ್ದ ಗರ್ಭಿಣಿಗೆ ದಾರಿಮಧ್ಯೆ ಹೆರಿಗೆ... ಕಣ್ಬಿಡುವ ಮುನ್ನವೇ ಮಗು ಸಾವು

ಕ್ವಾರಂಟೈನ್​​ನಲ್ಲಿದ್ದ ಗರ್ಭಿಣಿಗೆ ಹೆರಿಗೆ ನೋವು ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಆಕೆಗೆ ಆ್ಯಂಬುಲೆನ್ಸ್​​ನಲ್ಲೇ ಹೆರಿಗೆಯಾಗಿದೆ. ದುರಾದೃಷ್ಟವಶಾತ್​ ಮಗು ಸಾವನ್ನಪ್ಪಿದೆ.

quarantined_pregnant_women delivery
ಮಗು ಸಾವು
author img

By

Published : Jun 14, 2020, 4:08 PM IST

Updated : Jun 14, 2020, 4:18 PM IST

ಸೇಡಂ: ಕ್ವಾರಂಟೈನ್​​ನಲ್ಲಿದ್ದ ಗರ್ಭಿಣಿಗೆ ದಾರಿಮಧ್ಯೆ ಆ್ಯಂಬುಲೆನ್ಸ್​​ನಲ್ಲೇ ಹೆರಿಗೆಯಾಗಿದ್ದು, ಆಕೆಯ ಮಗು ಸಾವನ್ನಪ್ಪಿರುವ ಮನಕಲಕುವ ಘಟನೆ ಇಂದು ಜರುಗಿದೆ.

ಇದೇ ಜೂನ್​​ 11 ರಂದು ಮಹಾರಾಷ್ಟ್ರದ ಪುಣೆಯಿಂದ ಹಿಂದಿರುಗಿದ್ದ ಪಟ್ಟಣದ ಬಸವನಗರ ಬಡಾವಣೆ ನಿವಾಸಿ 35 ವರ್ಷದ ಗರ್ಭಿಣಿಯನ್ನು ಅಯೋಧ್ಯ ಲಾಡ್ಜ್​​ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

ಇಂದು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಮಹಿಳೆಯನ್ನು ಕರೆದೊಯ್ಯಲಾಗಿದೆ. ಕ್ವಾರಂಟೈನ್ ಆಗಿದ್ದ ಮಹಿಳೆಗೆ ಚಿಕಿತ್ಸೆ ನೀಡುವ ಸಂಬಂಧ ವೈದ್ಯರು ಕಲಬುರಗಿಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಆದರೆ ದಾರಿಮಧ್ಯೆ ಆ್ಯಂಬುಲೆನ್ಸ್​​ನಲ್ಲೇ ಗರ್ಭಿಣಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ದುರದೃಷ್ಟವಶಾತ್ ಮಗು ಕಣ್ಣು ಬಿಡುವ ಮುನ್ನವೇ ಕಣ್ಮುಚ್ಚಿದೆ‌. ನಂತರ ಆ್ಯಂಬುಲೆನ್ಸ್​​ನ ಚಾಲಕನು ಮಹಿಳೆಯನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Last Updated : Jun 14, 2020, 4:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.