ETV Bharat / state

ಕಳ್ಳತನವಾಗಿದ್ದ ದೇವರ ವಿಗ್ರಹ ಸೇರಿ 1 ಕೆಜಿ ಚಿನ್ನ, 8 ಕೆಜಿ ಬೆಳ್ಳಿ ಪತ್ತೆ ಹಚ್ಚಿದ ಪೊಲೀಸರು: ಖುಷಿಯಲ್ಲಿ ವಾರಸುದಾರರು - ಪೊಲೀಸರಿಂದ ಪ್ರಾಪರ್ಟಿ ರಿಕವರಿ ರಿಟರ್ನ್ ಪರೇಡ್

ಕಳೆದು ಹೋದ ವಸ್ತುಗಳು ಮರಳಿ ಸಿಗುವುದು ಕಷ್ಟ ಎಂದುಕೊಂಡಿದ್ದ ವಾರಸುದಾರರಿಗೆ ಕಲಬುರಗಿ ಪೊಲೀಸರು ಅವುಗಳನ್ನು ಪತ್ತೆ ಹಚ್ಚಿ, ಮರಳಿ ವಾರಸುದಾರರ ಕೈಗೆ ಒಪ್ಪಿಸಿದ್ದಾರೆ.

property-recovery-return-parade-by-kalaburagi-police
ಕಲಬುರಗಿ ಪೊಲೀಸರಿಂದ ಪ್ರಾಪರ್ಟಿ ರಿಕವರಿ ರಿಟರ್ನ್ ಪರೇಡ್
author img

By

Published : Jul 2, 2022, 7:23 PM IST

ಕಲಬುರಗಿ: ಕಷ್ಟಪಟ್ಟು ದುಡಿದು ಕೂಡಿಟ್ಟ ಹಣ, ಚಿನ್ನಾಭರಣ, ವಾಹನಗಳು ಕಳೆದುಹೋದರೆ ಯಾರಿಗೆ ತಾನೇ ಸಂಕಟವಾಗಲ್ಲ ಹೇಳಿ. ದೇವರ ವಿಗ್ರಹ, ಜಮೀನಿನಲ್ಲಿನ ರೈತರ ಪಂಪ್‌ಸೆಟ್‌ಗಳೂ ಖದೀಮರ ಪಾಲಾಗಿದ್ದವು. ಇದೀಗ ಕಳ್ಳತನವಾಗಿದ್ದ ಎಲ್ಲ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿ, ಇಂದು ವಾರಸುದಾರರಿಗೆ ಪೊಲೀಸರು ಹಸ್ತಾಂತರ ಮಾಡಿದ್ದಾರೆ.

ಹೌದು, ಕಲಬುರಗಿ ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿಂದು ಜಿಲ್ಲಾ ಪೊಲೀಸರು ಪ್ರಾಪರ್ಟಿ ರಿಕವರಿ ರಿಟರ್ನ್ ಪರೇಡ್ ಹಮ್ಮಿಕೊಂಡಿದ್ದರು. ಕಳೆದ ವರ್ಷದ ನವೆಂಬರ್​ನಿಂದ 2022ರ ಮೇ ತಿಂಗಳವರೆಗೆ ಜಿಲ್ಲೆಯ ವಿವಿಧ ಪೊಲೀಸ್​ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ಒಟ್ಟು 77 ಕಳ್ಳತನ ಪ್ರಕರಣಗಳನ್ನು ಹಚ್ಚಿ, ಒಟ್ಟು 133 ಆರೋಪಿಗಳನ್ನ ಬಂಧಿಸಿದ್ದಾರೆ.

ಅಲ್ಲದೇ, ಬಂಧಿತರಿಂದ 1,124.37 ಗ್ರಾಂ ಚಿನ್ನಾಭರಣ, 8,481 ಗ್ರಾಂ ಬೆಳ್ಳಿ ಆಭರಣ ಹಾಗೂ ನಗದು ಹಣ, ಹತ್ತಾರು ಬೈಕ್‌ಗಳು, ಮೋಟಾರ್ ಪಂಪ್‌ಸೆಟ್, ಕ್ರೂಸರ್, ಎತ್ತುಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು, ಇಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಇಶಾ ಪಂತ್ ನೇತೃತ್ವದಲ್ಲಿ ವಾರಸುದಾರರಿಗೆ ಹಸ್ತಾಂತರಿಸಿದರು.

ಕಲಬುರಗಿ ಪೊಲೀಸರಿಂದ ಪ್ರಾಪರ್ಟಿ ರಿಕವರಿ ರಿಟರ್ನ್ ಪರೇಡ್

ದೇವರ ವಿಗ್ರಹವನ್ನೂ ಬಿಡದ ಕಳ್ಳರು: ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಜಿಲ್ಲೆಯ ಕಮಲಾಪುರ ತಾಲೂಕಿನ ಪಟವಾದ ಗ್ರಾಮದಲ್ಲಿನ ಐತಿಹಾಸಿಕ ಹಾಗೂ ಪುರಾತನ ಕಾಲದ ಸಂಗಮೇಶ್ವರ ದೇವರ ಬೆಳ್ಳಿ ಮೂರ್ತಿಯನ್ನ ರಾತೋರಾತ್ರಿ ಕಳ್ಳರು ಕದ್ದೊಯ್ದಿದ್ದರು. ಹಲವು ದಿನಗಳಾದರೂ ಪತ್ತೆಯಾಗದಿದ್ದ ಈ ಪ್ರಕರಣವನ್ನು ಕಮಲಾಪುರ ಠಾಣೆ ಪೊಲೀಸರು ಕೊನೆಗೂ ಭೇದಿಸಿ ಮೂರ್ತಿಯನ್ನು ವಶಪಡಿಸಿಕೊಂಡಿದ್ದರು. ದೇವರ ವಿಗ್ರಹವನ್ನೂ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಮಾಡಬೂಳ ಪೊಲೀಸ್ ಠಾಣೆ ವ್ಯಾಪ್ತಿಯ ಸಣ್ಣೂರ ಗ್ರಾಮದ ಬಳಿ ದರೋಡೆಕೋರರ ಗ್ಯಾಂಗ್ ಕಾರೊಂದನ್ನು ನಿಲ್ಲಿಸಿದನ್ನ ಕಂಡು ದಾಳಿ ಮಾಡಿತ್ತು. ಚಾಕು ತೋರಿಸಿ ಕಾರಲ್ಲಿದ್ದ ಮಹಿಳೆಯ 17 ಗ್ರಾಂ ಮಾಂಗಲ್ಯ ಸರ ಮತ್ತು 10 ಸಾವಿರ ರೂಪಾಯಿ ನಗದು ಹಣ ದೋಚಿ ಖದೀಮರು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಮಾಡಬೂಳ ಠಾಣೆ ಪೊಲೀಸರು, ಆರೋಪಿಗಳನ್ನ ಬಂಧಿಸಿ ಚಿನ್ನಾಭರಣ ಮತ್ತು ಹಣ ಜಪ್ತಿ ಮಾಡಿ ಮಾಲೀಕರಿಗೆ ಮರಳಿ ಒಪ್ಪಿಸಿದ್ದಾರೆ.

ಇದರಿಂದ ಚಿನ್ನಾಭರಣ, ನಗದು ಹಣ ಸೇರಿದಂತೆ ಕಳ್ಳತನವಾಗಿದ್ದ ವಸ್ತುಗಳು ಮರಳಿ ಸಿಕ್ಕಿದ್ದಕ್ಕೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು. ಅಲ್ಲದೇ, ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆಯ ಮಾತುಗಳನ್ನೂ ಆಡಿದರು.

ಇದನ್ನೂ ಓದಿ: ಎ ಜೆ ಸದಾಶಿವ ವರದಿ ಜಾರಿಗೆ ಆಗ್ರಹ.. ಹೆದ್ದಾರಿ ತಡೆದು ಮಾದಿಗ ದಂಡೋರ ಸಮಿತಿ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.