ಕಲಬುರಗಿ : ಕಮಲಾಪುರ ಕೆಂಪು ಬಾಳೆಹಣ್ಣಿಗೆ ಭೌಗೋಳಿಕ ಸೂಚನೆ ನವೀಕರಿಸದ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಶಾಸಕರಾದ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಗ್ರಾಮಗಳಲ್ಲಿ ಬೆಳೆಯುತ್ತಿರುವ ವಿಶೇಷ ತಳಿಯ ಬಾಳೆಹಣ್ಣಿಗೆ ಸೆಪ್ಟೆಂಬರ್ 2009ರಲ್ಲಿ ಭೌಗೋಳಿಕ ಸೂಚನೆ ಪ್ರಮಾಣೀಕರಣ ಸಿಕ್ಕಿತ್ತು. ಸದರಿ ಟ್ಯಾಗ್ ಸೆಪ್ಟೆಂಬರ್ 2018ರವರೆಗೆ ಮಾತ್ರ ಮಾನ್ಯವಿತ್ತು. ನಂತರ ಅದನ್ನು ನವೀಕರಣಗೊಳಿಸಬೇಕಿತ್ತು. ಆದರೆ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನವೀಕರಣಗೊಳಿಸದೇ ನಿರ್ಲಕ್ಷ್ಯ ತೋರಿದ್ದರಿಂದ ಕಮಲಾಪುರ ಬಾಳೆಹಣ್ಣಿನ ಕೃಷಿಗೆ ಗಣನೀಯವಾಗಿ ಹಿನ್ನೆಡೆಯುಂಟಾಗಿದೆ. ಹಾಗಾಗಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.