ಕಲಬುರಗಿ: ಕೇಂದ್ರದಿಂದ ಪರಿಹಾರ ತರುವಲ್ಲಿ ವಿಫಲರಾದ ಕರ್ನಾಟಕದ ಎಂಪಿಗಳು ಕೇವಲ ಪೇಪರ್ ಹುಲಿಗಳು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ದಾಳಿ ನಡೆಸಿದ್ದಾರೆ.
ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ, ಪ್ರವಾಹದಿಂದ ಕರ್ನಾಟಕದ ಜನ ಸಂಕಷ್ಟದಲ್ಲಿದ್ದಾರೆ. ಆದ್ರೆ ಕರ್ನಾಟಕದ ಎಂಪಿಗಳು ಕೇಂದ್ರದಿಂದ ಪ್ರವಾಹ ಪರಿಹಾರ ತರುವ ಪ್ರಯತ್ನ ಮಾಡುತ್ತಿಲ್ಲ. ಕಷ್ಟದಲ್ಲಿರುವ ರಾಜ್ಯದ ರೈತರಿಗೂ ಕೇಂದ್ರದಿಂದ ಬೆಳೆ ಹಾನಿ ಪರಿಹಾರ ಕೊಡಿಸುವಲ್ಲಿ ರಾಜ್ಯದ ಎಂಪಿಗಳು ವಿಫಲರಾಗಿದ್ದಾರೆ.
ಮೋದಿಯಿಂದ ಪರಿಹಾರ ಕೇಳಲು ರಾಜ್ಯದ ಎಂಪಿಗಳು ಹೇದರುತ್ತಿರುವುದು ಯಾಕೆ?, ಇನ್ನೂ ಎಷ್ಟು ಜನ ರಾಜ್ಯದಲ್ಲಿ ಸಾಯಬೇಕು? ಎಂದು ಟ್ವಿಟ್ ಮಾಡುವ ಮೂಲಕ ರಾಜ್ಯದ ಬಿಜೆಪಿ ಎಂಪಿಗಳ ವಿರುದ್ಧ ಕಿಡಿಕಾರಿದ್ದಾರೆ.